EPF Balance: ಮಿಸ್ಡ್ ಕಾಲ್ ಕೊಟ್ಟು ಪಿಎಫ್ ಬ್ಯಾಲೆನ್ಸ್ ತಿಳಿಯುವುದು ಹೇಗೆ? ಇಲ್ಲಿದೆ ವಿವರ
Check Your EPF Balance by just a Missed Call ಸುಗ್ಗನಹಳ್ಳಿ ವಿಜಯಸಾರಥಿ Mar 08, 2023 | 5:14 PM - tv9 Kannada Missed Call To Check PF Amount: ನಿಮ್ಮ ಇಪಿಎಫ್ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಎಂದು ತಿಳಿಯುವುದು ಈಗ ಬಹಳ ಸುಲಭ. ಇದಕ್ಕೆ ಹಲವು ವಿಧಾನಗಳುಂಟು. ಅದರಲ್ಲಿ ಮೊಬೈಲ್ನಿಂದ ಮಿಸ್ಡ್ ಕಾಲ್ ಕೊಡುವ ಸೌಲಭ್ಯ ಬಹಳ ಜನಪ್ರಿಯ ಎನಿಸಿದೆ. ಈ ಬಗ್ಗೆ ವಿವರ: ಉದ್ಯೋಗಿಗಳ ಭವಿಷ್ಯ ನಿಧಿ (Employee Provident Fund) ಅಥವಾ ಇಪಿಎಫ್ ಕೇಂದ್ರ ಸರ್ಕಾರದ ಇಪಿಎಫ್ಒದಿಂದ (EPFO) ನಿರ್ವಹಿಸಲಾಗುತ್ತಿರುವ ಒಂದು ಪ್ರಮುಖ ಉಳಿತಾಯ ಯೋಜನೆ. ಉದ್ಯೋಗಿಗಳ ಜೀವನ ಭದ್ರತೆಗೆಂದು ರೂಪಿಸಲಾಗಿರುವ ಯೋಜನೆ ಇದು. ರೆಗ್ಯುಲರ್ ಎಂಪ್ಲಾಯೀ ಆಗಿ ನೇಮಕವಾದವರೆಲ್ಲರಿಗೂ ಸಾಮಾನ್ಯವಾಗಿ ಲಭ್ಯ ಇರುವ ಯೋಜನೆ ಇದು. ಉದ್ಯೋಗಿಯ ಬೇಸಿಕ್ ಸಂಬಳ ಮತ್ತು ಭತ್ಯೆ (DA- Dearness Allowance) ಮೊತ್ತದ ಶೇ. 12ರಷ್ಟು ಹಣ ಆ ಉದ್ಯೋಗಿಯ ಇಪಿಎಫ್ ಖಾತೆಗೆ ಪ್ರತೀ ತಿಂಗಳೂ ಸಂದಾಯವಾಗುತ್ತಾ ಹೋಗುತ್ತದೆ. ಈಗಂತೂ ಪ್ರತಿಯೊಬ್ಬ ಉದ್ಯೋಗಿಗೂ ಯುಎಎನ್ ನಂಬರ್ ಒದಗಿಸಲಾಗುತ್ತದೆ. ಈ ಯುಎಎನ್ ನಂಬರ್ ಅಡಿಯಲ್ಲಿ ಇಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ನೀವು ಕಂಪನಿ ಬದಲಿಸಿದಾಗ ಹೊಸ ಇಪಿಎಫ್ ಖಾತೆ ಸೃಷ್ಟಿಯಾದರೂ ಯುಎಎನ್ ನಂಬರ್ ಅದೇ ಇರುತ್ತದೆ. ವಿವಿಧ ಪಿಎಫ್ ಖಾತೆಗಳನ್ನು ವಿಲೀನಗೊಳಿಸಿ ಒಂದೇ ಖಾತೆಯಾಗಿ ಉಳಿಸಿಕೊಳ್ಳುವ ಅವಕಾಶವೂ ಇದೆ. ಈ ರೀತಿಯಾಗಿ ಇಪಿಎಫ್ ವ್ಯ