ಗಂಟೆ ಸರಿಸುಮಾರು ಸಿಕ್ಸ್ ಟ್ವೆಂಟಿ ಫೈವ್ ಏನೋ ಅಜನೆಯಾ(ಶಬ್ದ)ದಂತೆ ಭಾಸವಾಯಿತು ಥಟ್ ಅಂತ ಎಚ್ಚರವಾಯಿತು, ಅತ್ತಿತ್ತ ಕಣ್ಣಾಡಿಸಿದೆ ಕಣ್ಣಿನ ಆಟೋಫೋಕಸ್ ಸಂಯೋಜನೆಗೊಂಡಾಗ ಮಾನವ ಸಂಪನ್ಮೂಲ ನಿರ್ವಾಹಕರು! ಹೌದು ಪ್ರವೀಣ್ ಅವರು. ಯಾಕಿವತ್ತು ಇಷ್ಟು ಬೆಳಗ್ಗೆ ಎದ್ದಿದ್ದಾರೆ...? ಹಾs⁰⁰... ಇವತ್ತು ಒಂದು ಟ್ರಿಪ್ ಇದೆ. ಸಹಜವಾಗಿ ನಾನು ರವಿವಾರ ತಡವಾಗಿಯೇ ಎದ್ದು ಅಭ್ಯಾಸ, ಆದರೆ ನಿನ್ನೆ ರಾತ್ರಿ ಈ ವಿಚಾರವಾಗಿ ಮಾತನಾಡಿ ಬೇಗ ಏಳಬೇಕು ಎಂದು ಮನಸ್ಸಲ್ಲೇ ಅಂದುಕೊಂಡು ಮಲಗಿದ್ದೆ ಅದೇ ಕಾರಣವಾಗಿ ಬ್ರೈನ್ ಟೈಮ್ ಫಿಕ್ಸ್ ಮಾಡಿತ್ತು... ಅದೇ ಆರೂವರೆ... ಇನ್ನೂ ಐದು ನಿಮಿಷ ಇದೆ ಸ್ವಲ್ಪ ಬಿದ್ಕೊಳ್ಳೋಣ ಅನ್ನುವಷ್ಟರಲ್ಲಿ ಪ್ರವೀಣ್ ಅವ್ರು ಏಳಿ ಟೈಮ್ ಆಯ್ತು ಅನ್ಬೇಕಾ... ಹ್ಮ್ ಇನ್ನು ಮಲಗೋದು ಬೇಡ ಎಂದುಕೊಂಡು ಕುಳಿತೇ ಬಿಟ್ಟೆ. ಅವರು ಅವರ ಕೂಗು ಕೇಳಿ ಎದ್ದಿರಬೇಕು ಎನಿಸಿಕೊಂಡಿದ್ದರೇನೋ ನಾನು 6.30 ಆಗಲಿ ಎಂದು. ರೈಟ್ ಪರ್ಸನ್ ನಂದನ್ ಅವರು ಮತ್ತು ಲೆಫ್ಟ್ ಪರ್ಸನ್ ಉದಯ್ ಇನ್ನೂ ಎದ್ದಿರಲಿಲ್ಲ ಇಕ್ಕೆಲಗಳಲ್ಲಿ ( ಲೆಫ್ಟ್,ರೈಟ್ ), ನಂದನ್ ಅವರ ಅಧಿಸೂಚನೆಯಂತೆ ನಿದ್ದೆಯಲ್ಲಿದ್ದ ಅವರನ್ನ ಉದ್ದೇಷಿಸಿ ಇನ್ನೂ ಆರುವರೆಗೆ ಐದು ನಿಮಿಷ ಇದೆ ಎಂದು ಕೂಗಿದೆ ಆದರೆ 6.29 ಕ್ಕೆ 1 ನಿಮಿಷ ಮೊದಲೇ ಎದ್ದರು ( ನಾನಾಗುತ್ತಿದ್ದರೆ ಮಲಗುತ್ತಿದ್ದೆ ...
Comments
Post a Comment
Please write your comments, suggestions and feedback.