ಒಂದು ಡೈರಿ ಕಾಣೆಯಾಗಿತ್ತು


 ಒಂದು ಡೈರಿ ಕಾಣೆಯಾಗಿತ್ತು. ಅಡಿಕೆ ಒಣಗಿಸಲು ಹಾಕಿದ Solar Tarpaulin ನ ಒಳಗೆ ಬಿದ್ದಿದ್ದ ಗೋಣಿ ಚೀಲದಲ್ಲಿ ಹುಡುಕುತ್ತಿದ್ದೆ. Solar Tarpaulin ಅಡಿಕೆ 

ಒಣಗಿಸಲು ಇರುವ ವ್ಯವಸ್ಥೆಯಲ್ಲದೆ ಹಲವು ಉಪಯೋಗಗಳನ್ನು ಹೊಂದಿದೆ. ಅವುಗಳಲ್ಲಿ 
ತಾತ್ಕಾಲಿಕ ಗುಜರಿ ಶೇಖರಣೆಯೂ ಒಂದು. ಹಾಗೆ ಸುಫಲದ ಗೋಣಿಯಲ್ಲಿ ಹುಡುಕುತ್ತಿದ್ದಾಗ ಪಿ.ಯು.ಸಿ ಯ ದಿನಗಳು ನೆನಪಿಗೆ ಬಂದವು. ಗೋಣಿಯನ್ನು ಅಡ್ಡ ಹಾಕಿದವನೇ C.E.T Question Paperನ್ನು ಹಿಡಿದು ನಿಂತೆ. ದಿನಾಂಕ 03/05/2015 ಎಂದು ನಮೂದಿಸಿತ್ತು. ಅದೇ ದಿನ ನಾನು 
ಅವಳನ್ನು ಕೊನೇಯ ಬಾರಿ ಕಂಡದ್ದು. 
             PUC Exam Centre ಅದಲುಬದಲಾದ ವರ್ಷವದು. ನಮಗೆ ಕೊಂಬೆಟ್ಟು. CCTV Cam3ra ಇಲ್ಲವೆಂದು 'ಕೆಲವರಿಗೆ' ಖುಷಿ ಬೇರೆ. ನಾವು ಮಾತ್ರ ಅಲ್ಲ, 
ಅಂಬಿಕದವರೂ ಇದ್ದಾರಂತೆ!!! ಅದೇ 'ಕೆಲವರಿಗೆ' ಮತ್ತಷ್ಟು ಖುಷಿ. ಆದರೆ Bus Stand ನಿಂದ 1km
ನಡಿಗೆಯಿದೆ. ತ್ರಿವರ್ಣವನ್ನು ಹೊದ್ದಿರುವ ಕಂಬಗಳನ್ನು ನೋಡಿದಾಗ ಬಾಲ್ಯದ ಪ್ರಾಥಮಿಕ 
ನೆನಪಾಗುತ್ತದೆ. ನಾನು ಅವಳನ್ನು ಮೊದಲು ಕಂಡದ್ದು 28/03/2017ರ Electronics Examನಂದು. Exam
ಬರೆಯುವವರಲ್ಲಿ ಒಬ್ಬಳಾಗಿದ್ದ ಹುಡುಗಿ ಬರಬರುತ್ತಾ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಳು. ಮುಂದಲೆಯಲ್ಲಿ ಕುಂಕುಮ, ಮುಡಿಯಲ್ಲಿ ಒಂದು ಮೊಳ ಮಲ್ಲಿಗೆ, ಗೆಜ್ಜೆ, ಬಲದ 
ಕೈಯಲ್ಲೊಂದು ದಪ್ಪದ Plastic ಬಳೆ. ಇದಿಷ್ಟು ಇವಳಂಥಹ ಅಪರೂಪದ ಸ್ತ್ರೀಯರಲ್ಲಿ 
ಮಾತ್ರವೇ ಕಂಡು ಬರುವ ಲಕ್ಷಣಗಳು. ಮೊದಲೆಲ್ಲಾ ಅವಳಷ್ಟಕ್ಕೆ ಬರುತ್ತಿದ್ದವಳು ಬರಬರುತ್ತಾ ಅವಳ ಬರುವಿಕೆಗಾಗಿ ನನ್ನನ್ನು ಕಾಯುವಂತೆ ಮಾಡಿಬಿಟ್ಟಳು.  Exam ಮುಗಿದ ನಂತರ Exitನ ಎದುರಿಗೆ ಗೆಳೆಯರ ಜೊತೆ ನಿಂತಿದ್ದಾಗ ಒಂದೆರಡು ಬಾರಿ ಕಣ್ಣುಕೊಟ್ಟಿದ್ದಾಳೆ. ನನ್ನ ಇಬ್ಬರು ಆಪ್ತ ಗೆಳೆಯರಿಗೆ ಅವಳನ್ನು ತೋರಿಸಿದ್ದೆ. ನನ್ನಂಥವರು ಮೊದಲು ಮಾಡುವ ಕೆಲಸವಿದು!!! ಬಹುಶಃ 
ನಮ್ಮ ಗುಂಪು ನೋಡಿ, "Exam ಸಮಯದಲ್ಲಿ ಎಚ್ಚರವಿಲ್ಲದೆ ಹುಡುಗಿಯನ್ನು ಕಾಯುವವನು, 
ಅದೂ PUC!" ಎಂದು ನನ್ನ ಬಗ್ಗೆ ಅಸಹ್ಯಪಟ್ಟಿರಬಹುದು. ಆದರೆ ಅವಳಿಗೆ ತಿಳಿದಿರಲಿಕ್ಕಿಲ್ಲ, 
ನಾನು ಕಾಯುತ್ತಿದ್ದದ್ದು ಅವಳಿಗೆ ಮಾತ್ರ ಎಂದು.ಅದು ಯಾವುದೋ Exam ಮುಗಿಸಿ ನಾನು 
ಮತ್ತು Kaushik, Airport Taxiಗಳು ನಿಲ್ಲುವ ಎದುರಿನಲ್ಲಿರುವ ಗೋಡಂಗಡಿಯಲ್ಲಿ ಹೊಗೆಸೊಪ್ಪು 
ಖರೀದಿಸಿತ್ತಿರುವಾಗ ನೆಲ್ಲಿಕಟ್ಟೆಯ ಕಡೆಯಿಂದ ಬಂದವಳೇ ಮಂಗಳೂರಿನ ಕಡೆಯಿಂದ ಬರುವ private Busಗಳು ನಿಲ್ಲುವಲ್ಲಿ ಗೆಳತಿಯ ಜೊತೆ ನಿಂತಿದ್ದಳು. 
         ಕೊನೇಯ English Examನಂದು Register No. - Room No. ಓದುತ್ತಿದ್ದವಳೇ Room No.16 ಎಂದದ್ದು 
ಈಗಲೂ ನೆನಪಿದೆ. Exam Roomಗೆ ಹೋಗುತ್ತಿದ್ದವಳನ್ನೇ ಹಿಂಬಾಲಿಸಿ ಹೋದೆ. ಅದು ಕೊಂಬೆಟ್ಟಿನ 
ಕೆಳ ಅಂಗಣದಲ್ಲಿರುವ ಮಹಡಿ ಕಟ್ಟಡದ ಮೇಲಿನ ಕೊನೇಯ Room. ಬಹುಶಃ ಅವಳು ನಾನು ಹಿಂಬಾಲಿಸುತ್ತಿರುವುದನ್ನು ಗಮನಿಸಿರಬೇಕು. Roomಗೆ ಹೋಗುವ ಮೊದಲು ಅಂಗಳದಲ್ಲಿದ್ದ ನನಗೆ ಒಂದು ಕೋಪದ ನೋಟ ಬೀರಿ ಒಳಹೋದಳು. ಎಲ್ಲರೂ 
ನಕ್ಕಾಗಲೇ ಚಂದ ಕಾಣಬೇಕಾಗಿಲ್ಲ. ಕೆಲವರು ಕೋಪದಲ್ಲೂ ಚಂದ ಕಾಣುತ್ತಾರೆ ಅಲ್ವಾ? 
            ಅಂದು ಮೆಟ್ಟಿಲು ಇಳಿದು ಗೆಳತಿಯರ ಜೊತೆ ಹೋದವಳು ಮತ್ತೆ ಕಾಣಲು ಕಾಣಲು ಸಿಗಲಿಕ್ಕಿಲ್ಲವೇನೋ ಎಂದು ಅಂದುಕೊಂಡಿದ್ದೆ. ವಿವೇಕಾನಂದದ PUCಯಲ್ಲಿ ನಡೆದ C.E.T Examನಲ್ಲಿ ಮತ್ತೆ ಸಿಗುತ್ತಾಳೆಂದು ನಾನು 
ಹಗಲು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಪೂರ್ಣ ತೋಳಿನ ವಸ್ತ್ರ ಧರಿಸುವ ಸಜ್ಜನ ಸ್ತ್ರೀ ಅವಳು. ಆಶ್ಚರ್ಯ ಏನೆಂದರೆ ಅವಳು Exam ಬರೆಯೋದು ನನ್ನ ಗೆಳೆಯ Alan ಬರೆಯುವ Roomನಲ್ಲೇ! ಅದು Room No.206, ಮೊದಲ ಮಹಡಿಯಲ್ಲಿತ್ತು. ಮೇಲಿನ ಮಹಡಿಯಲ್ಲಿದ್ದ ಹೆಜ್ಜೇನಿನ ಗೂಡನ್ನು ನೋಡುತ್ತಿರುವಾಗ ಕೆಳಗಿನ ಮೆಟ್ಟಿಲಿನಿಂದ ಹೆಜ್ಜೆ ಮತ್ತು ಗೆಜ್ಜೆಯ ಸಪ್ಪಳ ಜೊತೆಯಾಗಿ ಕೇಳಿಸಿತು. ತಿರುಗಿನೋಡಿದರೆ ಅವಳು ಬರುತ್ತಿದ್ದಾಳೆ! ಅಯ್ಯೋ, ನನ್ನನ್ನು ಮಾತನಾಡಿಸಲು ಅಂದುಕೊಂಡಿರಾ? ಇಲ್ಲ, ಅಷ್ಟು ಭಾಗ್ಯ ನನಗೆಲ್ಲಿದೆ ಹೇಳಿ. ಅವಳೂ 
ನನ್ನಂತೆ College ಸುತ್ತಾಡಲು ಬಂದವಳು. C.E.T ಎರಡೇ ದಿನ ಇದ್ದುದರಿಂದ ಮಾರನೇ 
ದಿನ Exam ಮುಗಿಸಿ ಗೆಳೆಯರೊಂದಿಗೆ ಅವಳನ್ನು ಹಿಂಬಾಲಿಸುತ್ತಾ ಹೋದೆ. Gateನ ಎದುರಿನ 
ಬದಿಯಲ್ಲಿ ನಿಂತು Mobileನಲ್ಲಿ ಕರೆಮಾಡಿ ಯಾರಿಗೋ  ಕಾಯುತ್ತಿದ್ದಳು. ಆಗ ನನಗೆ ಅನಿಸಿದ್ದು ಅವಳು ಪುತ್ತೂರಿನ ಆಸುಪಾಸಿನವಳೆಂದು. 
           ಹೆಸರು ಗೊತ್ತಿಲ್ಲ. ಆದರೆ ನಮ್ಮ Electronics Examನಂದು ಬೇರೆ ಇದ್ದ Exam Computer Science
ಮಾತ್ರ. ನನ್ನ ಗೆಳೆಯ PCMAಯವನಾಗಿದ್ದ. ಅವಳ Collegeನಲ್ಲಿ Electronics ಇಲ್ಲ. ಹಾಗಾಗಿ 
ಅವಳು PCMC ಎಂಬುದು ಪಕ್ಕಾ. ಅವಳ ಬಗ್ಗೆ ನನಗೆ ಗೊತ್ತಿರವುದು ಇಷ್ಟೆ. Room No. 16, Room No.206, 
PCMC, ಕುಂಕುಮ, ಗೆಜ್ಜೆ ಮತ್ತು ಮಲ್ಲಿಗೆ. Room No.16ನ PUC Register No. ಮತ್ತು ನನ್ನ ಗೆಳೆಯನ 
ನಂತರದ Room No. 206ನ C.E.T Register Match ಮಾಡಲು ಹುಚ್ಚನಂತೆ KEA ಮತ್ತು State Pre-University Websiteನಲ್ಲಿ ಹುಡುಕಿದ್ದೇನೆ. ಏನೂ ಪ್ರಯೋಜನ ಆಗಲಿಲ್ಲ. ಹೆಸರು ಗೊತ್ತಿದ್ದರೆ facebook, instaದಲ್ಲಾದರೂ ಹುಡುಕಬಹುದು. ಆದರೆ, ಹೆಸರು ಹುಡುಕೋದು ಹೇಗೆ? PUC ಜೀವನ Final ಆಗಿದ್ದರಿಂದ 
ಮತ್ತೆ ಯಾರಲ್ಲೂ ಕೇಳಿ ತಿಳಿದುಕೊಲ್ಲುವ ಅವಕಾಶ ಸಿಗಲಿಲ್ಲ. facebookನಲ್ಲಿ ಅವಳ ಸಹಪಾಠಿಗಳಿಂದ ಗೌಪ್ಯವಾಗಿ ಉಗಿಸಿಕೊಂಡಿದ್ದೇನೆ. ನಾನು ಕೇಳುವುದು "English Exam Room no. 16ನಲ್ಲಿ ಮತ್ತು C.E.T Exam Room No. 206ನಲ್ಲಿ ಬರೆದ ಮಲ್ಲಿಗೆ ಮುಡಿಯುವ ಹುಡುಗಿ ನಿಮಗೆ ಗೊತ್ತಾ?" ಎಂದು, ಮತ್ತೆ ಉಗಿಯದೆ ಇನ್ನೇನು ಮಾಡುತ್ತಾರೆ ಹೇಳಿ?!! ಒಬ್ಬ ಇದು ಯಾವ 
ದಂಧೆಯೆಂದು ಕೇಳಿಬಿಟ್ಟಿದ್ದ!!! 
        ಪ್ರೀತಿ ನಿಜವಾಗಿದ್ದರೆ ಸಂಧಿಸಿಯೇ ತೀರುತ್ತದೆ ಎಂದು ಜ್ಞಾನಿಗಳು ಹೇಳುತ್ತಾರೆ. 
ಅವಳು NITKಯಲ್ಲಿ Engineering ಎಂದು ಗುಪ್ತಚರ ಮಾಹಿತಿಯಿದೆ. ಆದರೆ  ಆಧಾರ ರಹಿತ! 2017 ರಿಂದ ನಾನು ಅವಳನ್ನು ಹುಡುಕುತ್ತಲೇ ಇದ್ದೇನೆ. ನನ್ನ ಪ್ರೀತಿ ನಿಜವಾದಲ್ಲಿ ಅವಳು ನನ್ನನ್ನು ಸಂಧಿಸಬಹುದಾ? ಸಂಧಿಸೋದು ಬಿಡಿ, ಹೆಸರಾದರೂ ಗೊತ್ತಾಗುತ್ತಿದ್ದರೆ. ಜಗತ್ತಿನಲ್ಲಿ ನನ್ನಂಥವರೂ ಇರುತ್ತಾರ ಅಥವಾ ನಾನು ಮಾತ್ರ ಹೀಗೇನಾ? ಹೆಸರೇ ತಿಳಿಯದ ಹುಡುಗಿಯ ಬಗ್ಗೆ ತಲೆಕೆಡಿಸಿಕೊಂಡಿರುವುದು. 

ಯಾರದ್ದೋ ಇಂತಹ Whatsapp DPಯ ನೋಡಿದಾಗ ಭಯವಾಗುತ್ತದೆ.ಇದು ಪ್ರೀತಿಯೋ ಅಥವಾ ಅವಳ ಹೆಸರು ತಿಳಿಯಲು ನನ್ನಲ್ಲಿರುವ ಇರುವ ಕುತೂಹಲವಾಗಿರಬಹುದೋ?


Comments

Popular posts from this blog

Check Aadhaar PAN Link Status and Link with