ONJI KSRTC YATHRE
ಕೆಂಪು SPARKS ಚಪ್ಪಲಿ ಸಿಕ್ಕಿಸಿಕೊಂಡವನೆ 5sec ಕಿಟಕಿಯ ಕನ್ನಡಿಯಲ್ಲಿ ಬಿಂಬ ನೋಡಿಕೊಂಡು ಕೂದಲ ನಡುವೆ ಬೆರಳಾಡಿಸಿ ಗದ್ದೆಯ ಹುಣಿಯಲ್ಲಿ ಓಡುತ್ತಿದ್ದೆ. ಎಲ್ಲಿಯದರೂ ಗಂಟೆ 07:20AM ಕಳೆದಿದ್ದರೆ ಬಿಂಬ ನೋಡುಷ್ಟು ಪುರುಸೋತ್ತೂ ಇಲ್ಲ. ಬಹುಶಃ HIGH SCHOOLನ ನಂತರ ತಲೆಬಾಚಲು ಬಾಚಣಿಗೆ ಉಪಯೋಗಿಸಿರಲಿಕ್ಕಿಲ್ಲ ನಾನು. ಬಾಚಣಿಗೆಯಲ್ಲಿ ಚೆನ್ನಾಗಿ ತಲೆ ಬಾಚಿ ರಸ್ತೆ ಬದಿ TIE ಹಾಕಿಕೊಂಡು SCHOOL VANಗಾಗಿ ಕಾಯುತ್ತಿದ್ದ ನಾನು, ಸಮಯಪ್ರಜ್ಞೆ ಕಂಡುಕೊಂಡದ್ದು PUCಯ ನಂತರ. ಎದುರು ಮನೆಯ ಚೆನ್ನಪ್ಪ ಮಡಿವಾಳರ GLAMOUR ಶಬ್ಧ ಕೇಳಿದೊಡನೆ ನನ್ನ ಹೆಜ್ಜೆಗಳು ದೂರ ದೂರವಾಗಿಬಿಡುತ್ತಿದ್ದವು. ಮನೆಯಿಂದ ಬೆಳ್ಳಾರೆಗೆ 3km ದಾರಿ. ಬೆಳಗ್ಗಿನ ಬಹುತೇಕ ದಿನಗಳ ಪ್ರಯಾಣವನ್ನು ಅವರ GLAMOURನ ಹಿಂದಿನ SEATನಿಂದ ಕ್ರಮಿಸಿದ್ದೇನೆ. ಮಳೆಗಾಲದಲ್ಲಂತೂ SEATನ ಮೇಲಿದ್ದ ಮಳೆಹನಿಗಳನ್ನು ಹೀರಿಕೊಳ್ಳುತ್ತಿದ್ದುದು ನನ್ನ PANTSಗಳೇ. ಅಂತಿಮ ವರ್ಷದಲ್ಲಿ ಮೊದಲ ವರ್ಷ ಹೊಲಿಸಿದ PANTSನ್ನು GLAMOUR ಹತ್ತುವ ಮೂಲಕ ಹರಿಯಬಾರದ ಜಾಗಗಳಲ್ಲಿ ಹರಿಸಿಕೊಳ್ಳುತ್ತಿದ್ದೆ. ಕೆಲವು ಬಾರಿ ಬೆಳ್ಳಾರೆ ಪೇಟೆಯಲ್ಲಿ PILESನಂತೆ ಅನುಭವಿಸುತ್ತಾ BUSಗೆ ಕಾದಿದ್ದೇನೆ. ಈಗಲೂ ನನ್ನ BAGನಲ್ಲಿ ಸೂಜಿ ಮತ್ತು ನೂಲು ತಪ್ಪುವುದಿಲ್ಲ. BUSನಲ್ಲಿ ಕೂತು, ಧರಿಸಿದ್ದ PANTSಗೆ ಕೈ ಹೊಲಿಗೆ ಹಾಕುವಷ್ಟು ನೈಪುಣ್ಯತೆ ನನ್ನದು. ಕಳೆದ ೫ ವರ್ಷದ ಪ್ರಯಾಣವನ್