ONJI KSRTC YATHRE

 


                    ಕೆಂಪು SPARKS ಚಪ್ಪಲಿ ಸಿಕ್ಕಿಸಿಕೊಂಡವನೆ 5sec ಕಿಟಕಿಯ ಕನ್ನಡಿಯಲ್ಲಿ ಬಿಂಬ ನೋಡಿಕೊಂಡು ಕೂದಲ ನಡುವೆ ಬೆರಳಾಡಿಸಿ ಗದ್ದೆಯ ಹುಣಿಯಲ್ಲಿ ಓಡುತ್ತಿದ್ದೆ. ಎಲ್ಲಿಯದರೂ ಗಂಟೆ 07:20AM ಕಳೆದಿದ್ದರೆ ಬಿಂಬ ನೋಡುಷ್ಟು ಪುರುಸೋತ್ತೂ ಇಲ್ಲ. ಬಹುಶಃ HIGH SCHOOLನ ನಂತರ ತಲೆಬಾಚಲು ಬಾಚಣಿಗೆ ಉಪಯೋಗಿಸಿರಲಿಕ್ಕಿಲ್ಲ ನಾನು. ಬಾಚಣಿಗೆಯಲ್ಲಿ ಚೆನ್ನಾಗಿ ತಲೆ ಬಾಚಿ ರಸ್ತೆ ಬದಿ TIE ಹಾಕಿಕೊಂಡು SCHOOL VANಗಾಗಿ ಕಾಯುತ್ತಿದ್ದ ನಾನು, ಸಮಯಪ್ರಜ್ಞೆ ಕಂಡುಕೊಂಡದ್ದು PUCಯ ನಂತರ. ಎದುರು ಮನೆಯ ಚೆನ್ನಪ್ಪ ಮಡಿವಾಳರ GLAMOUR ಶಬ್ಧ ಕೇಳಿದೊಡನೆ ನನ್ನ ಹೆಜ್ಜೆಗಳು ದೂರ ದೂರವಾಗಿಬಿಡುತ್ತಿದ್ದವು. ಮನೆಯಿಂದ ಬೆಳ್ಳಾರೆಗೆ 3km ದಾರಿ. ಬೆಳಗ್ಗಿನ ಬಹುತೇಕ ದಿನಗಳ ಪ್ರಯಾಣವನ್ನು ಅವರ GLAMOURನ ಹಿಂದಿನ SEATನಿಂದ ಕ್ರಮಿಸಿದ್ದೇನೆ. ಮಳೆಗಾಲದಲ್ಲಂತೂ SEATನ ಮೇಲಿದ್ದ ಮಳೆಹನಿಗಳನ್ನು ಹೀರಿಕೊಳ್ಳುತ್ತಿದ್ದುದು ನನ್ನ PANTSಗಳೇ. ಅಂತಿಮ ವರ್ಷದಲ್ಲಿ ಮೊದಲ ವರ್ಷ ಹೊಲಿಸಿದ PANTSನ್ನು GLAMOUR ಹತ್ತುವ ಮೂಲಕ ಹರಿಯಬಾರದ ಜಾಗಗಳಲ್ಲಿ ಹರಿಸಿಕೊಳ್ಳುತ್ತಿದ್ದೆ. ಕೆಲವು ಬಾರಿ ಬೆಳ್ಳಾರೆ ಪೇಟೆಯಲ್ಲಿ PILESನಂತೆ ಅನುಭವಿಸುತ್ತಾ BUSಗೆ ಕಾದಿದ್ದೇನೆ. ಈಗಲೂ ನನ್ನ BAGನಲ್ಲಿ ಸೂಜಿ ಮತ್ತು ನೂಲು ತಪ್ಪುವುದಿಲ್ಲ. BUSನಲ್ಲಿ ಕೂತು, ಧರಿಸಿದ್ದ PANTSಗೆ ಕೈ ಹೊಲಿಗೆ ಹಾಕುವಷ್ಟು ನೈಪುಣ್ಯತೆ ನನ್ನದು. 

     ಕಳೆದ ೫ ವರ್ಷದ ಪ್ರಯಾಣವನ್ನು 07:45ರ STATE BUSನಲ್ಲಿ ಕಳೆದಿದ್ದೇನೆ. ನನ್ನ STATE BUS ಬೆಳ್ಳಾರೆಯಲ್ಲಿ ಹತ್ತುವ ಎಲ್ಲರಿಗೂ ಆಯ್ಕೆಯ ಆಸನಗಳನ್ನು ನೀಡುತಿತ್ತು.  ಬಹುಶಃ BUS ನಲ್ಲಿ SEAT ಸಿಗದೆ ಬೆಳ್ಳಾರೆಯಿಂದ ಪುತ್ತೂರು ಪ್ರಯಾಣಿಸುವವರು ತುಂಬಾ ವಿರಳ. ತೃಪ್ತಿ COLD HOUSEನ ಎದುರು GLAMOURನಿಂದ ಇಳಿದು STATE BANKಗಾಗಿ ಕಾಯುತ್ತಿದ್ದ ದಿನಗಳು, POOJA FLOWER STALLನ ಎದುರು ನಿಲ್ಲುತ್ತಿದ್ದ STATE BUS ಹತ್ತಲು ಎಡಗಾಲನ್ನು ಕೆಳಮೆಟ್ಟಿಲಿನ ಮೇಲೆ ಇಟ್ಟು, ಹತ್ತಲು ಹವಣಿಸುತ್ತಿದ್ದ ದಿನಗಳು ಅವು. ಸಂತೆಯ ಶನಿವಾರದಂದೆಲ್ಲಾ ಗಟ್ಟದವರ ಮೂಟೆಗಳನ್ನು ಇಳಿಸದೆ ಹತ್ತಲು ತಡವಾದ ದಿನಗಳು, ನೆಟ್ಟಾರಿನ ಅವಳಿ ತಿರುವುಗಳಲ್ಲಿ ತೊಟ್ಟಿಲಿನಂತೆ ತೂಗಿಕೊಂಡು EAR PHINEನಲ್ಲಿ ಇಷ್ಟದ ಹಾಡು ಕೇಳಿಕೊಂಡು ಇಬ್ಬನಿ ಸ್ನಾನದ ಪ್ರಕೃತಿಯನ್ನು ಕಣ್ಣುತುಂಬಿಕೊಳ್ಳುತ್ತಿದ್ದ ದಿನಗಳು, ಮಾಡಾವು CITY ಬಾರದೆ ನಮ್ಮ STATE BUS ತುಂಬಿತುಳುಕುತ್ತಿದ್ದ ದಿನಗಳು, COLLEGEನ STOPಗಿಂತ ಹಿಂದಿನ STOPನಲ್ಲಿಯೇ ಎದ್ದು ಪ್ರಯಾಣಿಕರನ್ನು ಸೀಳಿ, ಬೇರೆ COLLEGEನ ಗೆಳೆಯರಿಗೆ ಮುಗುಳ್ನಗುತ್ತಾ, ಕೈ ಹಾಯಿಸುತ್ತಾ ಮೆಟ್ಟಿಲ ಬಳಿ ಬಂದು ನಿಲ್ಲುವ ಕ್ಷಣಗಳು, ಬಾಗಿಲಿನಲ್ಲಿ ನೇತಾಡುವವರು ಒಳಬರಲೆಂದು ENGINE OFF ಮಾಡುತ್ತಿದ್ದ ದಿನಗಳು, BUS PASS ಮರೆತುಬಂದು ಪ್ರಯಾಣವನ್ನು ಫಜೀತಿಗೊಳಿಸಿದ ದಿನಗಳು, BUS PASS ಮರೆತುಬಂದ ದಿನಗಳು. ಪೈಲಾರ್ ಬಾರದೆ RUSH ಆಗುವ ನಮ್ಮ STATE BANK ; ನಮ್ಮ STATE BANK ಬಾರದೆ ಕಲ್ಮಡ್ಕದಲ್ಲಿ ಪಡುವ ಪಾಡು, ಕಲ್ಮಡ್ಕದಲ್ಲಿ SEAT ಪಡೆಯಲು ಕೆಳಗಿನ ಪೇಟೆಯ ಬಂಡಸಾಲೆ STOPಗೆ ಹೋದ ದಿನಗಳು, ಕಲ್ಮಡ್ಕವೂ ಬಾರದೆ ಮೊದಲ CLASSನಿಂದ ವಂಚಿತರಾದ ದಿನಗಳು, BUS SRIKEನಂದು CEMENT TRUCKಹತ್ತಿದ ದಿನಗಳು, ಬಾಗಿಲಿನ ಹಿಂದಿನ SEATನಲ್ಲಿ ಕೂತು ಇಡೀ BUS ಗೆ HINDI SONG  ಹಾಕುವ BUCKET ಮಾರುವವರು. ಚಿಲ್ಲರೆಗಾಗಿ CONDUCTERನನ್ನು ಹುಡುಕುವವರು, TICKET CHECKINGಗೆ ಬಂದಾಗ ನಿದ್ದೆಯಲ್ಲಿದ್ದವನನ್ನು ಎಬ್ಬಿಸುವ ಕ್ಷಣಗಳು, ಇಡೀ BUS ಗೆ ಕೇಳುವಂತೆ MOBILEನಲ್ಲಿ ಮಾತನಾಡುವವರ FREE ENTERTAINMENT, ಒದ್ದೆಯಾದ SEATನ್ನು ಛತ್ರಿಯಲ್ಲಿ ಒರೆಸಿದ ದಿನಗಳು.  

                     COLLEGEನಿಂದ ಹಿಂತಿರುಗುವಾಗ ಹತ್ತಲು ನೇತಾಡಿದ ದಿನಗಳು, ಕನಿಷ್ಟ ಪಕ್ಷ ತಿಂಗಳಾಡಿವರೆಗಿನ STANDING, ನಾವು ನಿಂತಿರುವವರ BAG ಹಿಡಿದುಕೊಂಡದ್ದು ಅಥವಾ ನಾವು ನಿಂತಿದ್ದಾಗ ನಮ್ಮ BAG ಹಿಡಿದುಕೊಂಡವರು, ಇದರ ನಡುವೆ BAG ಹಿಡಿದುಕೊಳ್ಳಲು ನಿರಾಕರಿಸುವ 40 ಕಳೆದ 'ಗೃಹಸ್ಥರು', CARRIERನಲ್ಲಿ ಇಟ್ಟ BAGಗೆ ಅಂಟಿಕೊಂಡ ಧೂಳು, SEAT ನಿಂದ ಅಂಗಿಗೆ ಅಂಟಿದ ಕಳೆ. ತಿರುವಿನಲ್ಲಿ CARRIERನಲ್ಲಿಟ್ಟಿದ್ದ BAG ಯರಾದರೊಬ್ಬರ ತಲೆಗೆ ಬಿದ್ದಾಗ ಬರುವ ನಗು, CONDUCTER ಎದುರು DOORಲ್ಲಿದ್ದಾಗ ಸೀಟಿ ಹೊಡೆಯಲು ವಿನಂತಿಸುವ ಹುಡುಗಿ,ಒದ್ದೆ ಛತ್ರಿಯನ್ನು ಎಲ್ಲಿಡಬೇಕೆಂದು ಗೊಂದಲಕ್ಕೊಳಗಾದ ಕ್ಷಣಗಳು, BUSನಿಂದ ಇಳಿಯುತ್ತಿರುವಾಗ ಮಳೆ ಬಂದರೆ ಛತ್ರಿಬಿಡಿಸಲು ಉದಾಸೀನವಾಗಿ BHAMA STORESಗೆ ಓಡಿದ ದಿನಗಳು. ಸರಸ್ವತಿ BANKನ ಒಳದಾರಿಯಲ್ಲಿ ಗೆಳೆಯರಿಗಾಗಿ, ಅವರ BUSಗಾಗಿ ಕಾಯುತ್ತಿದ್ದ ದಿನಗಳು. ಆ ಸಮಯದಲ್ಲಿ ಹೊಡೆಯುವ ಹರಟೆ. ದಾಟುತ್ತಿರುವುದು ONE WAY ROAD ಅಂತ ಗೊತ್ತಿದ್ದರೂ ರಸ್ತೆಯ ಎರಡೂ ಕಡೆ ಗಮನಿಸುವ ನಮ್ಮ ಪೆದ್ದು ಜಾಗರೂಕತೆ. COLLEGE GATEನತ್ತ ಹೆಜ್ಜೆ ಹಾಕುವಾಗ ಪುತ್ತೂರಿನ ಕಡೆಯಿಂದ ಆಗತಾನೆ BUSನಿಂದ ಇಳಿಯುತ್ತಿರುವ ಸಹಪಾಠಿಗಳಿಗಾಗಿ ಕಾದದ್ದು. BAGನಲ್ಲಿ ಛತ್ರಿಯಿದ್ದರೂ ಒದ್ದೆಯಾಗಿಸಲು ಮನಸಾಗದೆ HIGH SCHOOL ಹುಡುಗನ ಛತ್ರಿಯಲ್ಲಿ HIGH SCHOOL GATEವರೆಗೆ ಹೋಗಿ ಅಲ್ಲಿಂದ SPIDER MANನಂತೆ ಗೋಡೆಗೆ ಅಂಟಿಕೊಳ್ಳುತ್ತಾ CANTEEN ತಲುಪಿದ ದಿನಗಳು. SINGĹE FRONT DOOR BUS ಹತ್ತಲು ತಡವಾದಾಗ DRIVERನಿಂದ ಸಿಗುವ ಬೈಗುಳ, ಇಂತಹ BUSಗಳಲ್ಲಿ ಮಾತ್ರವೇ ಕೇಳಬರುವ "ಹಿಂದೆ ಹೋಗಿ, ಹಿಂದೆ ಹೋಗಿ" ಎನ್ನುವ ಅಪರೂಪದ ಮಾತುಗಳು, SEATಗಾಗಿ BAG ಇಟ್ಟದ್ದು, BUS RUSH ಇದ್ದಾಗ TICKET ಪಡೆಯಲಾಗದೆ NEXT STAGEನಲ್ಲಿ TICKET ಪಡೆದು ಉಳಿಕೆಯನ್ನು ನೆನೆಸಿ ಹಿಗ್ಗುವವರು,ಪುತ್ತೂರಿನ ವಿಶಾಲ BUS STAND, PUC ಸಮಯದ ನೆಲ್ಲಿಕಟ್ಟೆ ಬದಲಿ BUS STAND  ನಾವು ಪ್ರತಿದಿನ ಕೂರುತ್ತಿದ್ದ AIRPORT CHAIRS, WASHROOMನಿಂದ ಕೇಳುವ 'TABLE ತಟ್ಟುವಿಕೆಯಿಂದ ಕುಣಿಯುವ ನಾಣ್ಯಗಳ ಸದ್ದು', ನಿಂತ BUSನಲ್ಲಿ ಕೂತು ಅನುಭವಿಸಿದ ಸೆಕೆ, ಒಣದ್ರಾಕ್ಷಿ ಮಾರುವವರು, "ಉದಯವಾಣಿ - ಕರಾವಳಿ - ಕಿರಣ" ಎಂದು ಕೂಗುವ ಅಜ್ಜ, ಮತ್ತೆ ಮತ್ತೆ ಕೇಳಬೇಕೆನಿಸುವ AIR BREAK, ಅರಣ್ಯ ಕಛೇರಿಯ ಎದುರಿನ ಇಳಿಜಾರಿನಲ್ಲಿ ಬರುವ BREAK BEEP, ಎಲ್ಲವೂ ಅವಿಸ್ಮರಣೀಯ. 

          ದಿನಾ ಒಂದೇ BUS ಹಿಡಿಯುವವರಿಗಂತೂ ಪ್ರತಿದಿನ ಅವರವರ SEAT ಕಾದಿರಿಸಿದಂತೆ ಅವರಿಗಾಗಿ ಕಾಯುತ್ತಿರುತ್ತದೆ. ಬಹುಶಃ ನನ್ನ SEAT ಸಹ ನನ್ನ ಬರುವಿಕೆಗಾಗಿ ಕಾಯುತ್ತಿರಬಹುದು. ಹಿಂದಿನ ಬಲದ MUD GUARDನ ಎದುರಿನ SEATನ ಕನ್ನಡಿ ಪ್ರತಿದಿನ ತಳ್ಳಿಸಿಕೊಳ್ಳುವ ನನ್ನ ಕೈಗಳನ್ನು ಸ್ಪರ್ಷಿಸಲು ಹಾತೊರೆಯುತ್ತಿರಬಹುದು. COLLEGE ಮುಗಿದು BUS PASS ಅವಧಿ ಪೂರ್ಣಗೊಂಡಿದ್ದರೂ ಪುತ್ತೂರಿಗೆ ತೆರಳುವಾಗ ನನ್ನ ಕೈ ನೋಟಿನ ಬದಲು BUS PASS ಹಿಡಿದುಕೊಳ್ಳುತ್ತದೆ. ಬಹುಶಃ ನನ್ನ ಕೈಗಳಿಗೆ ಇನ್ನೂ ಗೊತ್ತಿಲ್ಲ, ನನ್ನ ನಿತ್ಯದ KSRTC ಯಾತ್ರೆ ಮುಗಿದಿದೆ ಎಂದು.


                                           ✍️ Ashit Rai T





Comments

Popular posts from this blog

Check Aadhaar PAN Link Status and Link with