ಒಂದು ಡೈರಿ ಕಾಣೆಯಾಗಿತ್ತು
ಒಂದು ಡೈರಿ ಕಾಣೆಯಾಗಿತ್ತು. ಅಡಿಕೆ ಒಣಗಿಸಲು ಹಾಕಿದ Solar Tarpaulin ನ ಒಳಗೆ ಬಿದ್ದಿದ್ದ ಗೋಣಿ ಚೀಲದಲ್ಲಿ ಹುಡುಕುತ್ತಿದ್ದೆ. Solar Tarpaulin ಅಡಿಕೆ ಒಣಗಿಸಲು ಇರುವ ವ್ಯವಸ್ಥೆಯಲ್ಲದೆ ಹಲವು ಉಪಯೋಗಗಳನ್ನು ಹೊಂದಿದೆ. ಅವುಗಳಲ್ಲಿ ತಾತ್ಕಾಲಿಕ ಗುಜರಿ ಶೇಖರಣೆಯೂ ಒಂದು. ಹಾಗೆ ಸುಫಲದ ಗೋಣಿಯಲ್ಲಿ ಹುಡುಕುತ್ತಿದ್ದಾಗ ಪಿ.ಯು.ಸಿ ಯ ದಿನಗಳು ನೆನಪಿಗೆ ಬಂದವು. ಗೋಣಿಯನ್ನು ಅಡ್ಡ ಹಾಕಿದವನೇ C.E.T Question Paperನ್ನು ಹಿಡಿದು ನಿಂತೆ. ದಿನಾಂಕ 03/05/2015 ಎಂದು ನಮೂದಿಸಿತ್ತು. ಅದೇ ದಿನ ನಾನು ಅವಳನ್ನು ಕೊನೇಯ ಬಾರಿ ಕಂಡದ್ದು. PUC Exam Centre ಅದಲುಬದಲಾದ ವರ್ಷವದು. ನಮಗೆ ಕೊಂಬೆಟ್ಟು. CCTV Cam3ra ಇಲ್ಲವೆಂದು 'ಕೆಲವರಿಗೆ' ಖುಷಿ ಬೇರೆ. ನಾವು ಮಾತ್ರ ಅಲ್ಲ, ಅಂಬಿಕದವರೂ ಇದ್ದಾರಂತೆ!!! ಅದೇ 'ಕೆಲವರಿಗೆ' ಮತ್ತಷ್ಟು ಖುಷಿ. ಆದರೆ Bus Stand ನಿಂದ 1km ನಡಿಗೆಯಿದೆ. ತ್ರಿವರ್ಣವನ್ನು ಹೊದ್ದಿರುವ ಕಂಬಗಳನ್ನು ನೋಡಿದಾಗ ಬಾಲ್ಯದ ಪ್ರಾಥಮಿಕ ನೆನಪಾಗುತ್ತದೆ. ನಾನು ಅವಳನ್ನು ಮೊದಲು ಕಂಡದ್ದು 28/03/2017ರ Electronics Examನಂದು. Exam ಬರೆಯುವವರಲ್ಲಿ ಒಬ್ಬಳಾಗಿದ್ದ ಹುಡುಗಿ ಬರಬರುತ್ತಾ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಳು. ಮುಂದಲೆಯಲ್ಲಿ ಕುಂಕುಮ, ಮುಡಿಯಲ್ಲಿ ಒಂದು ಮೊಳ ಮಲ್ಲಿಗೆ, ಗೆಜ್ಜೆ, ಬಲದ ...