ಬಂದ ದಾರಿ ಬದಲಾಗಿತ್ತು !!




            ಗಂಟೆ ಸರಿಸುಮಾರು ಸಿಕ್ಸ್ ಟ್ವೆಂಟಿ ಫೈವ್ ಏನೋ ಅಜನೆಯಾ(ಶಬ್ದ)ದಂತೆ ಭಾಸವಾಯಿತು ಥಟ್ ಅಂತ ಎಚ್ಚರವಾಯಿತು, ಅತ್ತಿತ್ತ ಕಣ್ಣಾಡಿಸಿದೆ ಕಣ್ಣಿನ ಆಟೋಫೋಕಸ್ ಸಂಯೋಜನೆಗೊಂಡಾಗ ಮಾನವ ಸಂಪನ್ಮೂಲ ನಿರ್ವಾಹಕರು! ಹೌದು ಪ್ರವೀಣ್ ಅವರು. ಯಾಕಿವತ್ತು ಇಷ್ಟು ಬೆಳಗ್ಗೆ ಎದ್ದಿದ್ದಾರೆ...? ಹಾs⁰⁰... ಇವತ್ತು ಒಂದು ಟ್ರಿಪ್ ಇದೆ. ಸಹಜವಾಗಿ ನಾನು ರವಿವಾರ ತಡವಾಗಿಯೇ ಎದ್ದು ಅಭ್ಯಾಸ, ಆದರೆ ನಿನ್ನೆ ರಾತ್ರಿ ಈ ವಿಚಾರವಾಗಿ ಮಾತನಾಡಿ ಬೇಗ ಏಳಬೇಕು ಎಂದು ಮನಸ್ಸಲ್ಲೇ ಅಂದುಕೊಂಡು ಮಲಗಿದ್ದೆ ಅದೇ ಕಾರಣವಾಗಿ ಬ್ರೈನ್ ಟೈಮ್ ಫಿಕ್ಸ್ ಮಾಡಿತ್ತು... ಅದೇ ಆರೂವರೆ... ಇನ್ನೂ ಐದು ನಿಮಿಷ ಇದೆ ಸ್ವಲ್ಪ ಬಿದ್ಕೊಳ್ಳೋಣ ಅನ್ನುವಷ್ಟರಲ್ಲಿ ಪ್ರವೀಣ್ ಅವ್ರು ಏಳಿ ಟೈಮ್ ಆಯ್ತು ಅನ್ಬೇಕಾ... ಹ್ಮ್ ಇನ್ನು ಮಲಗೋದು ಬೇಡ ಎಂದುಕೊಂಡು ಕುಳಿತೇ ಬಿಟ್ಟೆ. ಅವರು ಅವರ ಕೂಗು ಕೇಳಿ ಎದ್ದಿರಬೇಕು ಎನಿಸಿಕೊಂಡಿದ್ದರೇನೋ ನಾನು 6.30 ಆಗಲಿ ಎಂದು.

              ರೈಟ್ ಪರ್ಸನ್ ನಂದನ್ ಅವರು ಮತ್ತು ಲೆಫ್ಟ್ ಪರ್ಸನ್ ಉದಯ್ ಇನ್ನೂ ಎದ್ದಿರಲಿಲ್ಲ ಇಕ್ಕೆಲಗಳಲ್ಲಿ ( ಲೆಫ್ಟ್,ರೈಟ್ ), ನಂದನ್ ಅವರ ಅಧಿಸೂಚನೆಯಂತೆ ನಿದ್ದೆಯಲ್ಲಿದ್ದ ಅವರನ್ನ ಉದ್ದೇಷಿಸಿ ಇನ್ನೂ ಆರುವರೆಗೆ ಐದು ನಿಮಿಷ ಇದೆ ಎಂದು ಕೂಗಿದೆ ಆದರೆ 6.29 ಕ್ಕೆ 1 ನಿಮಿಷ ಮೊದಲೇ ಎದ್ದರು ( ನಾನಾಗುತ್ತಿದ್ದರೆ ಮಲಗುತ್ತಿದ್ದೆ ಇನ್ನೂ ಒಂದು ನಿಮಿಷ ! ) ಏನೋ ಒಂಥರಾ ಅಮಲು ನಿನ್ನೆಯದ್ದಿರಬೇಕು ( ತಡರಾತ್ರಿ ನಿದ್ದೆ ) ' ಲೋಕಾ ಸಮಸ್ಥಾ ಸುಖಿನೋ ಭವಂತು ಅಂದುಕೊಂಡು ' ಯೆದ್ದೇ ಬಿಟ್ಟೆ colgate ಟೂಥ್ ಪೇಸ್ಟನ್ನು ಬ್ರಶ್ ಗೆ ಹಚ್ಚಿದವನೇ ವಿದ್ಯುತ್ ಚಿಲುಮೆಯ ಬಿಸಿ ನೀರಿನಲ್ಲಿ ಮುಖ ತೊಳೆದು ಬಂದಾಗ ಜಯರಾಜರ  ಕಣ್ಣ ಚಾ ರೆಡೀಯಾಗಿತ್ತು ! ಆದರೆ ಪ್ರವೀಣ್ ಅವರ ಫೋನ್ ಕಾಲ್ ಕೂಡ ಮೊಬೈಲ್ ಡಿಸ್ಪ್ಲೇ ನಲ್ಲಿ ಪ್ರಿಂಟ್ ಆಗಬೇಕಾ! ಅವರು ಮತ್ತು ಶಂಕರ್ ಬೈಕ್ ವ್ಯವಸ್ಥೆ ಮಾಡಲು ಹೋಗಿದ್ದರು. ಗ್ಲಾಸಿನ 90% ಚಾ ಕೂಡಿದವನೇ ಜರ್ಕಿನ್ ಮತ್ತು ಶೂಸ್ ಧರಿಸಿ ನಾನು ಹೊರಟೇ ಬಿಟ್ಟೆ.

              ಇನ್ನೇನು ಬೈಕ್ ಹತ್ತಿ ಕುಳಿತು ಕೊಳ್ಳಬೇಕು ಅನ್ನುವಷ್ಟರಲ್ಲಿ ' ವೈಟ್ ಶಾರ್ ಮಾಡ್ಕೊಳ್ಳಿ ದಪ್ಪದವರು ಅದರಲ್ಲೊಬ್ಬ ಇದರಲ್ಲೊಬ್ಬ ' ಎಂದು ನಂದನರ ಗ್ರಾವಿಟಿ ಥಿಯರಿ... ಅವರ ಮಾತು ಸಮರ್ಪಕವಾಗಿಯೇ ಇತ್ತು ಯಾಕೆಂದರೆ ನಮ್ಮ ವಾಹನದ ತಾಕತ್ತಿಗೆ ಅನುಸಾರವಾಗಿ. ನಮ್ಮ ಬೈಕ್ ನಲ್ಲಿ ಪ್ರವೀಣರು, ಉದಯ್ ಮತ್ತು ನಾನು ಅವರದರಲ್ಲಿ ಶಂಕರ್, ಜಯರಾಜ್ ಮತ್ತು ನಂದನ್ ಅವರು. ಸಮತೂಕ ಎರಡರಲ್ಲೂ ಸರಿಸುಮಾರು ±180 KG.

              ಆಲಂಗಿರಿ ಮತ್ತು ಗುನ್ನ ಹಳ್ಳಿ ಹಿಲ್ಸ್ ನಮ್ಮ destination. ಮೊದಲಿಗೆ ಗುನ್ನ ಹಳ್ಳಿ ಹಿಲ್ಸ್ ಗೆ ತದನಂತರ ಆಲಂಗಿರಿಗೆ. ಆದರೆ ನಮ್ಮ ತಂಡದ ಇನ್ನೊಂದು ಬೈಕ್ ಸಲ್ಪ ವೇಗವಾಗಿತ್ತು ಸರದಿ ತಿಳಿದಿರದ ಕಾರಣ ಅವರು ಮೊದಲಿಗೆ ಆಲಂಗಿರಿಗೆ ಪಯಣ ಅಂದುಕೊಂಡಿದ್ದರು ಹಾರನ್ ಹೊಡೆದು ನಮ್ಮ ಟರ್ನ್ ಸೂಚಿಸಿದವು U ಟರ್ನ್ ಹೊಡೆದು ನಮ್ಮನ್ನು ಹಿಂಬಾಲಿಸಿ ಅವರೂ ಜೊತೆಗೆ ಬಂದರು. ದೂರದ ಬೆಟ್ಟ ನೋಡಲು ನುಣ್ಣಗೆ ಅನ್ನುವಂತೆ ದೂರದಿಂದಲೇ ಒಂದೆರಡು ಚಿತ್ರ ನನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದೆ. ಅಂತೂ ಆ ಹಳ್ಳಿಯ ದಾರಿಯಲ್ಲಿ, ಜುಂ ಎನ್ನುವ ಚಳಿಯಲ್ಲಿ ಮಂಜಿನ ವಾತಾವರಣ, ಬೈಕ್ 40 Km/h ನಲ್ಲಿ ಸಾಗುತ್ತಿತ್ತು. ರಸ್ತೆಯ ಇಕ್ಕೆಲಳಲ್ಲಿ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದವರು ನಮ್ಮನ್ನು ಗಮನಿಸುತ್ತಿದ್ದರು ನಮ್ಮ ಪರಿಚಯವಿಲ್ಲವೆಂದೊ, ನಮ್ಮ ವೇಷ ನೋಡಿಯೋ ಅರ್ಥವಾಗಲಿಲ್ಲ. ಅಂತೂ ಬೆಟ್ಟದ ತಪ್ಪಲಿಗೆ ತಲುಪಿದೆವು. ಬೈಕಿನ ಸ್ಟಾಂಡ್ ನೆಲಕ್ಕೆ ಊರಿ ಕಾಲ್ನಡಿಗೆ ಪ್ರಾರಂಭ.

              ಮೊದಲಿಗೆ ಪ್ರವೀಣ್ ಹಿಂದೆ ಉದಯ್ ಮತ್ತು ಶಂಕರ್ ನಂತರ ಜಯರಾಜ್, ನಾನು ನಂದನ್ ಹೀಗೆ ಸರದಿ ಸಾಲಿನಲ್ಲಿ ಹೊರಟೆವು. ಬರಬರುತ್ತಾ ರಾಯರ ಕುದುರೆ ಕತ್ತೆಯಾಗಿತ್ತು, ನಡೆಯುವ ವೇಗ ಕಡಿಮೆಯಾಗಿತ್ತು ಅಗಲ ಕಿರಿದಾದ ಹಾದಿ ಅಲ್ಲಲ್ಲಿ ಕಲ್ಲು ಬಂಡೆಗಳು ಅದಲ್ಲದೆ ಬೆಟ್ಟ ಏರುವ ದಾರಿಯಲ್ಲವೇ... ಬೆಳಗ್ಗಿನ one cup ಟೀ ಎನರ್ಜಿ ಅಷ್ಟೇ. ಆದರೆ ಊರಿನಲ್ಲಿದ್ದಾಗ ರಬ್ಬರ್ ಟ್ಯಾಪಿಂಗ್ ನಲ್ಲಿ ಪರಿಣಿತಿ ಇದ್ದ ಕಾರಣ ಉದಯ್ ಗೆ ರಬ್ಬರ್ ಫ್ಲಾಟ್ ನಲ್ಲಿ ಜಿಗಿದು ಅಭ್ಯಾಸ, ಅದರ ಪರಿಣಾಮ ತೋರಿಸಿಯೇ ಬಿಟ್ಟರು ಪಂಕ್ತಿಯಲ್ಲಿ ಎಲ್ಲರಿಗಿಂತ ಮೊದಲು ಅವನೇ... ಗಿಡಗಳನ್ನು ಸರಿಸುತ್ತಾ ಒಣಹುಲ್ಲು ಹಾಸಿದ ಬಂಡೆಯ ಮೇಲೆ ಕಾಲು ಜಾರದಂತೆ ಜಾಗರೂಕತೆಯಿಂದ ಮುನ್ನಡೆದೆವು. ಅದೊಂದು ದೊಡ್ಡ ಬಂಡೆ ಕಾಲಿಡಲು ಗ್ರಿಪ್ ಇಲ್ಲ! ಇಳಿಜಾರಾದ ಬಂಡೆ... ಹತ್ತಲು ಏನು ಮಾಡೋದು ಅನ್ನುವಷ್ಟರಲ್ಲಿ ಅಲ್ಲೊಂದು ತಂತಿ ಇತ್ತು ಹತ್ತಿ ಮೇಲೇರಿದೆ. 'ವಿದ್ಯುತ್ ತಂತಿ ಇರಬಹುದು ನೋಡಿಕೊಳ್ಳಿ...' ಜಾಗರೂಕತೆಯ ಅಶರೀರವಾಣಿ... ( ಯಾರಿರಬಹುದು ನಿಮಗೆ ಬಿಟ್ಟಿದ್ದು ) ಅಂತೂ ಎಲ್ಲರೂ ಅದೇ ತಂತಿಯ ಸಹಾಯದಿಂದ ಮೇಲೇರಿದರು. ನಮ್ಮ ಜೊತೆ ಇನ್ನೂ ಒಂದು ಕಣ್ಣಿತ್ತು - ಕ್ಯಾಮೆರಾ Canon EOS 1500D... ಹೊರ ತೆಗೆದ ಶಂಕರ್ ಫೋಟೋ ಕ್ಲಿಕ್ಕಿಸಲು ಪ್ರಾರಂಭಿಸಿದ ನನ್ನದು... ನನ್ನದು... ಒಬ್ಬರದಾಗಿ ಇನ್ನೊಬ್ಬ ಹೀಗೆ ಪಯಣದ km/h ಇನ್ನೂ ಕುಸಿಯಿತು.


 ಕೊನೆಗೂ ಬೆಟ್ಟದ ತುದಿಗೆ ತಲುಪಿದೆವು ಅಲ್ಲೊಂದು ಹಾಗಲಕಾಯಿ ಆಕಾರದ ಅಗಲ ಕಿರಿದಾದ ಕೊಳವಿತ್ತು 


ನೋಡಲು ಸಣ್ಣದಾದರೂ ಆಳ ಬರೋಬ್ಬರಿ ಒಬ್ಬ ಮುಳುಗುವಷ್ಟಿದೆಯಂತೆ ! ಮೇಲೆ ಹೋದಾಗ ಬೆಟ್ಟ ತುದಿ ತಲುಪಿತ್ತು ಒಂದು ಆಂಜನೇಯ ಸ್ವಾಮಿ ಗುಡಿಯಿತ್ತು. ಛಾಯಾ ಚಿತ್ರ ಮುಂದುವರಿಯುತಿತ್ತು. ಸ್ವಲ್ಪ ಹೊತ್ತು ವಿಶ್ರಮಿಸಿ  ಎಲ್ಲರ ಫೋಟೋ ಸೆರೆಹಿಡಿದೆವು ನಾನೂ ಒಂದೆರಡು ಭಾವಚಿತ್ರ ಕ್ಲಿಕ್ಕಿಸಿಕೊಂಡೆ. ಟೈಮ್ 9 ಗಂಟೆ ಹೊರಡೋಣ ಆಫೀಸಿಗೆ ಹೋಗಬೇಕಿದೆ ತಡವಾಗುತ್ತೆ ಎಂದುಕೊಂಡು ಕೆಳನಡಿಗೆ ಪ್ರಾರಂಭಿಸಿದೆವು ಬಂದ ದಾರಿ ಸಿಗಲಿಲ್ಲವಾದರೂ ಬೇರೆ ದಾರಿಯಲ್ಲಿ ಹೆಜ್ಜೆ ಹಾಕುತ್ತಾ ಗ್ರಿಪ್ ಇಲ್ಲದ ಬಂಡೆಯ ಮೇಲೆ ಕುಳಿತು ಕುಪ್ಪಳಿಸಿ, ಜಾರಿ ಇಳಿದು ಹಾಸ್ಯಮಯ/ಸಾಹಸ ದಿಂದ ಕೆಳ ತಲುಪಿದೆವು. 


ಈಗ ಎಲ್ಲರ ಹೊಟ್ಟೆಯೂ ಚುರುಗುಟ್ಟುತ್ತಿತ್ತು ಹೌದು ಬ್ರೇಕ್ಫಾಸ್ಟ್ ಆಗಿಲ್ಲ ಹಾದಿ ಹೋಟೆಲ್ ಯಲ್ಲಮ್ಮದ ಕಡಗೆ...

              ಬಿಸಿ ಬಿಸಿ ಸಿಂಗಲ್ ಸಾದಾ ದೋಸೆ ಜೊತೆ ಒಂದೊಂದು ಓಮ್ಲೆಟ್ ! ಒಂದು ಮಿಸ್ಸಿಂಗ್... ಅದೇ ಚಹಾ ! ನಮ್ಮ ಮಂಗಳೂರಿನ ( ದ.ಕ, ಕೇರಳ ) ಕಡೆ ತಿಂಡಿ ಜೊತೆ ಟೀ ಮಾಮೂಲು ಆದರೆ ಇಲ್ಲಿ ( ಚಿಂತಾಮಣಿ, ಚಿಕ್ಕಬಳ್ಳಾಪುರ, ಬೆಂಗಳೂರು ) ಕಡೆ ತಿಂಡಿ ಜೊತೆ ಟೀ, ಕಾಫಿ ಕಾಂಬಿನೇಷನ್ ಕಡಿಮೆ. ಹೋಟೆಲ್ಗಳಲ್ಲಿ ತಿಂಡಿ ಸಿಕ್ಕರೂ ಟೀ, ಕಾಫೀ ಸಿಗಲು ಕಷ್ಟ. ನಾವು ಈ ಹೋಟೆಲ್ ನ ಮಾಮೂಲಿ ಗಿರಾಕಿಗಳು ಟೀ ಬೇಕೆಂದಾಗ ಹತ್ತಿರದ ಟೀ ಸ್ಟಾಲ್ ನಿಂದ 6 ಟೀ ಪಾರ್ಸೆಲ್ ತಂದು ರೆಡಿ ಮಾಡುವಷ್ಟರಲ್ಲಿ ಸಮಯ ಮೀರಿ ಹೋಗಿತ್ತು. ಬಿಲ್ ಪಾವತಿಸಲು ತೆರಳಿದಾಗ ಟೀ ಆಗಿದೆ ಎಂದರೂ ಬೇಡ ಲೇಟ್ ಆಯಿತು ಎಂದು ಹೊರಟೇ ಬಿಟ್ಟೆವು. ಬಿಲ್ ಎಷ್ಟು ಕೇಳಿದಾಗ ₹ 501 ಎಂದು ತಮಾಷೆಗೆ ಹೇಳಿದರೂ ಅಷ್ಟಾಗಿರಲಿಲ್ಲ. ಅಂತೂ ಆ ದಿನ 9.30 ರ ವೇಳೆಗೆ ರೂಮಿನ ಬಾಗಿಲು ನಿಮಗಾಗಿ ತೆರೆದಿತ್ತು! 

             ಸಮಯದ ಅಭಾವದಿಂದಾಗಿ ಆಲಂಗಿರಿ ಕಡೆಗಿನ ಪಯಣ ರದ್ದು ಮಾಡಲಾಗಿತ್ತು !


             Do Share to Support Me ❤️




Shankar

Praveen P


Nandan PG

Jayaraj D

It's me RajKinningar


The location with latitude and longitude 

Thank You ❤️


Comments

Post a Comment

Please write your comments, suggestions and feedback.

Popular posts from this blog

Check Aadhaar PAN Link Status and Link with