ಊರೆಲ್ಲಾ ಅವನದ್ದೇ ಸುದ್ದಿ
ನೀವಂದುಕೊಂಡಂತೆ ಇದು ಪ್ರೇಯಸಿಯ ಜೊತೆ ಪರಾರಿಯಾಗಿ ಊರಲ್ಲಿ ಚರ್ಚೆಗೆ ಗ್ರಾಸವಾಗಿರುವ ಯಾವುದೊ ಹುಡುಗನ ಕತೆಯಲ್ಲ. Single boy, ಅಂದರೆ ಒಂಟಿ. ಹಾಗಂತ ಹುಡುಗನಲ್ಲ. ಹೆಜ್ಜೆಯನ್ನು ಅನ್ವೇಷಿಸಿದಾಗ 35 ರಿಂದ 45kg ತೂಗುವ 'ಒಂಟಿ' ಇವನು. ಎರಡು ಮೂರು ಜನ ಸೇರಿದಲ್ಲೆಲ್ಲಾ ಇವನದ್ದೇ ಸುದ್ದಿ. ಉಜಿರ್ ಕಣಿ ಕೆರೆಪ್ಪುವಲ್ಲಿ, ಕಂಗ್ ತ ಗುಂಡಿ ತೆಗೆಯುವಲ್ಲಿ, ಸಂಕ್ರಮಣದ ತಂಬಿಲದಲ್ಲಿ, ಗದ್ದೆಗೆ ಈಟ್ ಹಾಕುವಲ್ಲಿ ಎಲ್ಲೆಲ್ಲೂ ಅವನದ್ದೇ ಸುದ್ದಿ.
ಇವನು ಮೊದಲು ದಾಳಿಯಿಡಲು ಶುರುಮಾಡಿದ್ದು ಪೂಜಾರಿಯವರ ಹೊಸ ತೋಟದಲ್ಲಿ. ಕಳೆದ ವರ್ಷದವರೆಗೆ ಭತ್ತ ಬೆಳೆಯುತ್ತಿದ್ದ ಪೂಜಾರಿಯವರು 'ನನ ಮಾಂತ ಕಂಡಟ್ ದಾಯ್ತ ಆಪುಂಡು' ಅಂತ ಯೋಚನೆ ಮಾಡಿ ಅರ್ಧ ಮುಡಿ ಗದ್ದೆಯಲ್ಲಿ ನೂರು ಚಿಲ್ಲರೆ ಮಂಗಳ ಹಾಕಿದ್ದಾರೆ. ಮಧ್ಯೆ ಮಧ್ಯೆ ಬಾರೆ. ಗುಂಡಿ ತೆಗೆದು ಹಾಕಿದ ಮಣ್ಣಿನ ಗುಪ್ಪೆ Waste ಆಗುವುದು ಬೇಡ ಎಂದು ಮರಗೆಣಸು ಊರಿದ್ದರು. ಅವರಿಗೆ ಅಡಿಕೆ ಕೃಷಿ ಜೀವಮಾನದಲ್ಲಿಯೇ ಮೊದಲು. ಅರೆಗ್ಗಲದಲ್ಲಿ ಅರ‍್ವತ್ತ ಮತ್ತು ಅಕ್ಕಂದಿರ ಜೊತೆ ತರಕಾರಿ ಬೆಳೆಯುವ ಇವರದ್ದು ಶುದ್ಧ ಅಳಿಯಕಟ್ಟು ಕುಟುಂಬ. ದಾನ, ಧರ್ಮದ ಕುಟುಂಬ ಎಂದರೂ ತಪ್ಪಾಗಲಾರದು. ಊರೆಲ್ಲಾ ತಾವು ಬೆಳೆದ ತರಕಾರಿ ಹಂಚುತ್ತಾರೆ. Lock Down ಸಮಯದಲ್ಲಿ ಊರಿನವರನ್ನು ಸ್ವಥಃ ಬರಹೇಳಿ Cement Bagನಷ್ಟರ ಕುಟ್ಟಿಗೋಣಿಗಳಲ್ಲಿ, 10kg ರೈತಬಂಧು ಚೀಲಗಳಲ್ಲಿ ಸಾಕಷ್ಟು ತರಕಾರಿ ಹಂಚಿದ್ದಾರೆ. ಇವರು ಅಲಸಂಡೆ ತಂದು ಹಿಂದಿರುಗುವಾಗ ನನ್ನ ತಂದೆ ಪಗರವಾಗಿ ತೆಂಗಿನಕಾಯಿಗಳನ್ನು ಕೊಡುವುದನ್ನು ನೋಡಿದಾಗಲೆಲ್ಲಾ 8ನೇ ತರಗತಿಯ Social Science ಪಠ್ಯಪುಸ್ತಕದ ಕೊನೇಯ ಪುಟಗಳಲ್ಲಿ ಬರುವ Barter Syatem of Exchange ನೆನಪಾಗುತ್ತದೆ.
ಇಂತಹ ಸ್ನೇಹ, ಭಾವ ಜೀವಿಯಾಗಿರುವ ಇವರ ಮೇಲೆ ಕತ್ತಲಲ್ಲಿ ಪ್ರಹಾರಮಾಡುವ ಇವನನ್ನು ಏನು ಮಾಡೋದು ಹೇಳಿ? ತನ್ನ ದಾಡೆಗಳನ್ನು ನಾಯೆರ್ ನಂತೆ ಮರಕೆರೆಂಗೆ ನ ಗುಪ್ಪೆಗಳಿಗೆ ಹಿಡಿದು ಏನೆಲ್‌ನಲ್ಲಿ ಪೊಡಿಕ್ಕ್ ಅಡತ್ತಿ ಕಂಡತಂಚನೆ ಮಾಡಿದ್ದಾನೆ. ಬಾಳೆ ಗೊನೆಗಳು ಇನ್ನೇನು ಕಟಾವಿಗೆ ಬಂದಿರುವುದರಿಂದ ಪೂಜಾರಿಯವರಿಗೆ ಇವನ ಆತಂಕ ಇಮ್ಮಡಿಯಾಗಿದೆ. ಎಲ್ಲಿಯಾದರು ಬಾರೆ ಜಬ್ಬಲು ಶುರು ಮಾಡಿದರೆ ಬಾಳೆಗೊನೆಗಳ ಆಸೆ ಬಿಡಬೇಕಷ್ಟೆ. ಅವರ ಮನೆ ತೋಟದಿಂದ 200m ದೂರದ ಅಡ್ಡದಲ್ಲಿ ಇರುವುದರಿಂದ ಅವರ ತೋಟದ ಎದುರಲ್ಲಿ ಇರುವ ನಮಗೆ, ರಾತ್ರಿಯಲ್ಲಿ ತೋಟದತ್ತ Tourch Light ಹಾಯಿಸಲು ಪ್ರತಿಭಾರಿ ನೆನಪಿಸುತ್ತಾರೆ. ಅವರ ಭಿನ್ನಹಕ್ಕಾಗಿ ಅಲ್ಲವಾದರೂ ಮೂತ್ರ ಶಂಕೆಗೆ ಏಳುವಾಗಲಂತೂ ನಮ್ಮ ಮನೆಯ Tourchಗಳು ಅವರ ತೋಟದತ್ತ ಮುಖಮಾಡದೆ ಇರಲಾರವು. ಬಾಳೆಗಿಡ ನೆಡುವಾಗ ಕೆಲಸಗಾರರು ಬೊಲ್ಪು, ಬೊಲ್ಪುಗೇ ಅಮಲಿನಲ್ಲಿ ಗಿಡಗಳ ಮಧ್ಯೆ ಅಂತರ ಕಾಯ್ದುಕೊಳ್ಳದೆ ನೆಟ್ಟದ್ದರಿಂದ ನಮ್ಮ Tourch Light ತೋಟದ ಒಳಗೆ ಹೇಗೆ pass ಆಗೋದು ಹೇಳಿ? ಮನೆಯ ಅಂಗಳದ Bulb Light ಅಡಿಯಲ್ಲಿ ಹಾದುಹೋಗುವವರಿಗೆಲ್ಲಾ Tourch Light ಯಾವ ಲೆಕ್ಕ? ಇವನ ಉಪದ್ರ ಇವರಿಗೆ ಮಾತ್ರ ಅಲ್ಲ. ಗುಡ್ಡೆಯ ಗೇರು ತೋಪಿನಲ್ಲಿ free ಆಗಿ ಅಗತ್ತೆ ಮಾಡಿಕೊಡುತ್ತಾನೆ. ನಮ್ಮ ತೋಟದಲ್ಲೂ ಕೆಲವು ಮರಗೆಣಸಿನ ಮುದೆಲುಗಳನ್ನು ಒತ್ತರೆ ಮಾಡಿದ್ದಾನೆ. ಮೇಲೆ Goods Ape Raiಗಳ ಮನೆಯ ಹಿಂದುಗಡೆ ಇದ್ದ ಮೂಂಡಿಯ ಮುದೆಲುಗಳನ್ನು ಚೆಂಡಾಡಿದ್ದಾನೆ. ಕೆಲವರು ತೋಟಕ್ಕೆ ಹಟ್ಟಿ ಗೊಬ್ಬರ ಹಾಕುವುದನ್ನು ಬಿಟ್ಟುಬಿಟ್ಟಿದ್ದಾರೆ. ಇವನು ಅದರ ಮೂರಿ ಹಿಡಿದು ಬಂದು ದಾಂಧಲೆಮಾಡಿಬಿಡುತ್ತಾನೆಂದು. ಅಡಿಕೆ ಬುಡದಲ್ಲಿರಬೇಕಾದ ಗೊಬ್ಬರ, ತಟ್ಟಿನಲ್ಲಿರುತ್ತದೆ. ಕೆಲ ದಿನಗಳಿಂದ ನನಗೂ ಮೇಲಿನ ಮನೆಯ 6ನೇ classನ ಹುಡುಗನಿಗೂ ಒಂದೇ ಕೆಲಸ, ಇವನ ಹೆಜ್ಜೆಗಳನ್ನು ಹಿಂಬಾಲಿಸುವುದು. ಪೂಜಾರಿಯವರ ಜಾತಕದ ಮೃಗಕ್ಕೂ ಇವನಿಗೂ ಆಗಿಬರೋದಿಲ್ಲವೋ ಏನೋ, ಅವರ ಭತ್ತ ನಾಟಿಮಾಡಿದ ಮಜಲುಗದ್ದೆಯ ಒಂದು ಬದಿ ಹುಣಿಯನ್ನು ಅಲಸಂಡೆ ಸಾಲು ತೆಗೆದಂತೆ ಮಾಡಿದ್ದಾನೆ.
ಡಿಫರೆಂಟ್ ಬರೆಹ... ಮುಂದುವರಿಸಿ... ಶುಭವಾಗಲಿ
ReplyDeleteThank you sir.
Delete