ಊರೆಲ್ಲಾ ಅವನದ್ದೇ ಸುದ್ದಿ
ನೀವಂದುಕೊಂಡಂತೆ ಇದು ಪ್ರೇಯಸಿಯ ಜೊತೆ ಪರಾರಿಯಾಗಿ ಊರಲ್ಲಿ ಚರ್ಚೆಗೆ ಗ್ರಾಸವಾಗಿರುವ ಯಾವುದೊ ಹುಡುಗನ ಕತೆಯಲ್ಲ. Single boy, ಅಂದರೆ ಒಂಟಿ. ಹಾಗಂತ ಹುಡುಗನಲ್ಲ. ಹೆಜ್ಜೆಯನ್ನು ಅನ್ವೇಷಿಸಿದಾಗ 35 ರಿಂದ 45kg ತೂಗುವ 'ಒಂಟಿ' ಇವನು. ಎರಡು ಮೂರು ಜನ ಸೇರಿದಲ್ಲೆಲ್ಲಾ ಇವನದ್ದೇ ಸುದ್ದಿ. ಉಜಿರ್ ಕಣಿ ಕೆರೆಪ್ಪುವಲ್ಲಿ, ಕಂಗ್ ತ ಗುಂಡಿ ತೆಗೆಯುವಲ್ಲಿ, ಸಂಕ್ರಮಣದ ತಂಬಿಲದಲ್ಲಿ, ಗದ್ದೆಗೆ ಈಟ್ ಹಾಕುವಲ್ಲಿ ಎಲ್ಲೆಲ್ಲೂ ಅವನದ್ದೇ ಸುದ್ದಿ. ಇವನು ಮೊದಲು ದಾಳಿಯಿಡಲು ಶುರುಮಾಡಿದ್ದು ಪೂಜಾರಿಯವರ ಹೊಸ ತೋಟದಲ್ಲಿ. ಕಳೆದ ವರ್ಷದವರೆಗೆ ಭತ್ತ ಬೆಳೆಯುತ್ತಿದ್ದ ಪೂಜಾರಿಯವರು 'ನನ ಮಾಂತ ಕಂಡಟ್ ದಾಯ್ತ ಆಪುಂಡು' ಅಂತ ಯೋಚನೆ ಮಾಡಿ ಅರ್ಧ ಮುಡಿ ಗದ್ದೆಯಲ್ಲಿ ನೂರು ಚಿಲ್ಲರೆ ಮಂಗಳ ಹಾಕಿದ್ದಾರೆ. ಮಧ್ಯೆ ಮಧ್ಯೆ ಬಾರೆ. ಗುಂಡಿ ತೆಗೆದು ಹಾಕಿದ ಮಣ್ಣಿನ ಗುಪ್ಪೆ Waste ಆಗುವುದು ಬೇಡ ಎಂದು ಮರಗೆಣಸು ಊರಿದ್ದರು. ಅವರಿಗೆ ಅಡಿಕೆ ಕೃಷಿ ಜೀವಮಾನದಲ್ಲಿಯೇ ಮೊದಲು. ಅರೆಗ್ಗಲದಲ್ಲಿ ಅರ‍್ವತ್ತ ಮತ್ತು ಅಕ್ಕಂದಿರ ಜೊತೆ ತರಕಾರಿ ಬೆಳೆಯುವ ಇವರದ್ದು ಶುದ್ಧ ಅಳಿಯಕಟ್ಟು ಕುಟುಂಬ. ದಾನ, ಧರ್ಮದ ಕುಟುಂಬ ಎಂದರೂ ತಪ್ಪಾಗಲಾರದು. ಊರೆಲ್ಲಾ ತಾವು ಬೆಳೆದ ತರಕಾರಿ ಹಂಚುತ್ತಾರೆ. Lock Down ಸಮಯದಲ್ಲಿ ಊರಿನವರನ್ನು ಸ್ವಥಃ ಬರಹೇಳಿ Cement Bagನಷ್ಟರ ಕುಟ್ಟಿಗೋಣಿಗಳಲ್ಲಿ, 10kg ರೈತಬಂಧು ಚೀಲಗಳಲ್ಲ...