ರಾಷ್ಟ್ರ ನಿರ್ಮಾಣದಲ್ಲಿ ಸ್ಕೌಟಿಂಗ್ ಪಾತ್ರ ಹಿರಿದು-ಎಕೆಎಂ ಅಶ್ರಫ್ ಮಿನಿ ಕ್ಯಾಂಪೂರಿ ಸಮಾರೋಪ



ಕುಂಬಳೆ: ವಿದ್ಯಾರ್ಥಿ ಜೀವನದ ಪಾಠಗಳು ಭವಿಷ್ಯದ ಬದುಕಿನ ಸುಲಲಿತತೆಗೆ ಮಾರ್ಗದರ್ಶಿಯಾಗಿರುತ್ತದೆ. ಹೆಚ್ಚು ಅನುಭವಗಳು ಬದುಕನ್ನು ಸ್ಪುಟವಾಗಿ ಬೆಳೆಯುವಲ್ಲಿ ನೆರವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಶಿಕ್ಷಣ ಇಲಾಖೆ ವಿದ್ಯಾಥರ್ಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಬಹುಮುಖೀ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಅವಕಾಶ ನೀಡುತ್ತಿದೆ. ಅದರ ಸಮರ್ಪಕ ಸದುಪಯೋಗ ಅಗತ್ಯ ಎಂದು ಮಂಜೇಶ್ವರ ಬ್ಲಾ.ಪಂ. ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ತಿಳಿಸಿದರು. ಕಾಸರಗೋಡು ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಲ್ಲಿ ಮೂರು ದಿನಗಳ ಕಾಲ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ನಡೆದ ಮಿನಿ ಕ್ಯಾಂಪೂರಿಯ ಭಾನುವಾರ ಸಂಜೆ ನಡೆದ ಸಮಾರೋಪವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾವಲಂಬನೆ, ಸ್ವಚ್ಚತೆ ಹಾಗೂ ಸಾಹಸ ನಿರ್ವಹಣೆಯಲ್ಲಿ ಮಾರ್ಗದಶರ್ಿಯಾಗಿ ಮುನ್ನಡೆಸುವ ಸ್ಕೌಟ್ಸ್- ಗೈಡ್ಸ್ ರಾಷ್ಟ್ರ ನಿಮರ್ಾಣದಲ್ಲಿ ಪ್ರಧಾನ ಪಾತ್ರ ವಹಿಸುತ್ತಿವೆ. ಸ್ವಾಮಿ ವಿವೇಕಾನಂದರಿಂದ ಮಾಜೀ ರಾಷ್ಟ್ರಪತಿಗಳಾಗಿದ್ದ ಕ್ಷಿಪಣಿ ಜನಕ ಕಲಾಂ ವರೆಗೆ ಜಗತ್ತಿಗೇ ಭಾರತದ ಶಕ್ತಿ, ಸಾಮಥ್ರ್ಯವನ್ನು ತಿಳಿಯಪಡಿಸಿದ ಮಹಾತ್ಮರ ಆದರ್ಶಗಳು ಹೊಸ ತಲೆಮಾರಿಗೆ ಎಂದಿಗೂ ಬೆಳಕಾಗಬೇಕು ಎಂದು ಅವರು ಕರೆನೀಡಿದರು. ಸ್ವಾರ್ಥ ಲಾಲಸೆಗಳೊಳಗಾಗದೆ ಆರ್ತರ ಸಂಕಷ್ಟಗಳಿಗೆ ಧ್ವನಿಯಾಗುವ ವಿಶ್ವಮಾನವತಾವಾದ ಆದರ್ಶವಾಗಿರಲಿ ಎಂದು ಅವರು ತಿಳಿಸಿದರು. ಕುಂಬಳೆ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರೀಫ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೃಹತ್ ಸಂಖ್ಯೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ಶಿಬಿರಾಥರ್ಿಗಳಿಂದ ಮಿನಿ ಜಾಂಬೂರಿ ವಿಶಿಷ್ಟವಾಗಿ ಮೂಡಿಬಂದಿದೆ ಎಂದು ತಿಳಿಸಿದರು. ವಿದ್ಯಾಥರ್ಿ ಜೀವನದ ಇಂತಹ ಅನುಭವಗಳು ಜೀವನದ ಸುಸೂತ್ರ ನಿರ್ವಹಣೆಗೆ ಕಾರಣವಾಗಿ ಸುದೃಢ ರಾಷ್ಟ್ರ ನಿಮರ್ಾಣಕ್ಕೆ ಕಾರಣವಾಗಲಿದೆ ಎಂದರು. ಕುಂಬಳೆ ಗ್ರಾ.ಪಂ. ಸದಸ್ಯ ಹರೀಶ್ ಗಟ್ಟಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಸ್ಕೌಟಿಂಗ್ ದಕ್ಷಿಣ ವಲಯಾಧಿಕಾರಿ ಪ್ರಶಾಂತ್ ಉಪಸ್ಥಿತರಿದ್ದು ಶುಭಹಾರೈಸಿದರು. ಗೈಡ್ಸ್ ಅಧಿಕಾರಿಗಳಾದ ಆಶಾಲತಾ, ಉಷಾ ಪಿ.ಟಿ, ಸಾಬು ಥೋಮಸ್, ಶಾಲಾ ಆಡಳಿತಾಧಿಕಾರಿ ಶ್ಯಾಂ ಭಟ್ ದಭರ್ೆಮಾರ್ಗ ಉಪಸ್ಥಿತರಿದ್ದರು. ಗೈಡ್ಸ್ ತರಬೇತುದಾರರಾದ ರೇಷ್ಮಾ ಹಾಗೂ ವಿನಿತಾ ಅವರನ್ನು ಗೌರವಿಸಲಾಯಿತು. ಶಿಬಿರ ನಿರ್ವಹಣಾ ಸಮಿತಿ ಪ್ರಧಾನ ಸಂಚಾಲಕ ಎಸ್.ಎನ್.ರಾವ್ ಮುನ್ನಿಪ್ಪಾಡಿ ಸ್ವಾಗತಿಸಿ, ಸ್ಕೌಟ್ಸ್ ಜಿಲ್ಲಾ ಕಾರ್ಯದಶರ್ಿ ಕಿರಣ್ ಪ್ರಸಾದ್ ಕೂಡ್ಲು ವಂದಿಸಿದರು. ಜಿಲ್ಲಾ ಸ್ಕೌಟ್ಸ್ ಆಯುಕ್ತ ಗುರುಮೂತರ್ಿ ನಾಯ್ಕಾಪು ಹಾಗೂ ಅಜಿತ್ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದ ಮೂರನೇ ದಿನವಾದ ಭಾನುವಾರ ರಾಷ್ಟ್ರದ ಇತಿಹಾಸ, ಪರಂಪರೆಗಳ ಪ್ರದರ್ಶನಗಳು ನಡೆದವು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸದಸ್ಯ ಹರೀಶ್ ಗಟ್ಟಿ ಉದ್ಘಾಟಿಸಿದರು. ಶಿಕ್ಷಣ ತಜ್ಞ, ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ವಿ.ಬಿ.ಕುಳಮರ್ವ ಉಪಸ್ಥಿತರಿದ್ದರು.



  • By : Samarasudhi

Comments

Popular posts from this blog

ಬಂದ ದಾರಿ ಬದಲಾಗಿತ್ತು !!