ಐಫೋನ್ ಎಕ್ಸ್ ಸ್ಫೋಟ

Vijaya Karnataka Web | Updated 
ಐಫೋನ್ ಎಕ್ಸ್‌ ಮಾದರಿಯನ್ನು ಹೊಸ ಸಾಫ್ಟ್‌ವೇರ್ 12.1ಗೆ ಅಪ್‌ಡೇಟ್ ಮಾಡುವ ಸಂದರ್ಭದಲ್ಲಿ ಫೋನ್ ಬಿಸಿಯಾಗಿ ಏಕಾಏಕಿ ಸ್ಫೋಟಗೊಂಡಿದೆ ಎಂದು ಬಳಕೆದಾರರೊಬ್ಬರು ಟ್ವಿಟರ್‌ನಲ್ಲಿ ದೂರಿದ್ದಾರೆ.

ಹೊಸದಿಲ್ಲಿ: ಸಾಫ್ಟ್‌ವೇರ್ ಅಪ್‌ಡೇಟ್ ವೇಳೆ ಆ್ಯಪಲ್ ಐಫೋನ್ ಎಕ್ಸ್ ಸ್ಫೋಟಗೊಂಡಿದೆ.

ಆ್ಯಪಲ್ ಕಳೆದ ವರ್ಷ ಬಿಡುಗಡೆ ಮಾಡಿದ್ದ ಐಫೋನ್ ಎಕ್ಸ್‌ ಮಾದರಿಯನ್ನು ಹೊಸ ಸಾಫ್ಟ್‌ವೇರ್ 12.1ಗೆ ಅಪ್‌ಡೇಟ್ ಮಾಡುವ ಸಂದರ್ಭದಲ್ಲಿ ಫೋನ್ ಬಿಸಿಯಾಗಿ ಏಕಾಏಕಿ ಸ್ಫೋಟಗೊಂಡಿದೆ ಎಂದು ಬಳಕೆದಾರರೊಬ್ಬರು ಟ್ವಿಟರ್‌ನಲ್ಲಿ ದೂರಿದ್ದಾರೆ.
https://twitter.com/rocky_mohamad/status/1062554244241190913/photo/1

ಸಿರಿಯಾ ಮೂಲದ ರಾಕಿ ಮಹಮ್ಮದಾಲಿ ಎಂಬವರು ಸ್ಫೋಟಗೊಂಡ ಆ್ಯಪಲ್ ಐಫೋನ್ ಎಕ್ಸ್‌ ಚಿತ್ರ ಸಹಿತ ಟ್ವೀಟ್ ಮಾಡಿದ್ದು, ಓಎಸ್ ಅಪ್‌ಡೇಟ್ ಮಾಡುವಾಗ ಆ್ಯಪಲ್ ಐಫೋನ್ ಎಕ್ಸ್ ಸ್ಫೋಟಗೊಂಡಿದೆ. ಇಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. 
ಇದಕ್ಕೆ ಪ್ರತಿಯಾಗಿ ಟ್ವೀಟ್ ರಿಪ್ಲೈ ಮಾಡಿರುವ ಆ್ಯಪಲ್, ಈ ರೀತಿಯಾಗಲು ಸಾಧ್ಯವಿಲ್ಲ. ಅದು ಅನಿರೀಕ್ಷಿತ. ನಿಮ್ಮ ವಿವರಗಳನ್ನು ಹಂಚಿಕೊಳ್ಳಿ, ಈ ಬಗ್ಗೆ ನಾವು ಗಮನ ಹರಿಸುತ್ತೇವೆ ಎಂದು ಹೇಳಿದೆ. 

ಉಳಿದಂತೆ ಆ್ಯಪಲ್ ಐಫೋನ್ ಸ್ಫೋಟಗೊಂಡ ಪ್ರಕರಣ ಬಗ್ಗೆ ಆ್ಯಪಲ್ ಸಂಸ್ಥೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಕಳೆದ ಆಗಸ್ಟ್‌ನಲ್ಲಿ ಆ್ಯಪಲ್ ಐಫೋನ್ 6 ಒಂದು ಚೀನಾದ ಶಾಂಘೈನಲ್ಲಿ ಸ್ಫೋಟಗೊಂಡಿತ್ತು. ಕಾರಿನ ಡ್ಯಾಶ್‌ಬೋರ್ಡ್‌ ಮೇಲೆ ಇರಿಸಿದ್ದ ಐಫೋನ್ ಬಿಸಿಯಾಗಿ ಸ್ಫೋಟವಾಗಿತ್ತು. 





Comments

Popular posts from this blog

ಬಂದ ದಾರಿ ಬದಲಾಗಿತ್ತು !!