Those Days of Birth Days
ಈ ದಿನ ಏನೋ ವಿಶೇಷವಾಗಿದೆ. ಶಾಲಾ Prayer Assemblyಯಲ್ಲಿ ಎಲ್ಲರೂ ನಿಮ್ಮನ್ನೇ ನೋಡುತ್ತಿದ್ದಾರೆ. ನಿಮ್ಮ ಧರಿಸು ಎಂದಿನಿಂದ ವರ್ಣಮಯವಾಗಿದೆ. ಪ್ರತಿದಿನವೂ ನೀಲಿ ಚಡ್ಡಿಯಲ್ಲಿರುತ್ತಿದ್ದ ನೀವು ಅಂದು ಅದ್ಯಾವುದೋ ಹೆಚ್ಚು ಜೇಬುಗಳಿರುವ Pants ತೊಟ್ಟಿದ್ದೀರಿ. ತರಗತಿಯಲ್ಲಿಟ್ಟ Bagನಲ್ಲಿ ಅಪ್ಪ ಬರುವಾಗ ಪೇಟೆಯಿಂದ ತೆಗೆದುಕೊಟ್ಟ Chocolate Packet. ನಿಮ್ಮ ಸುತ್ತಲೂ ಗೆಳೆಯರು ನಿಂತುಕೊಂಡಿದ್ದಾರೆ. ನೀವು ಒಂದಾದರೂ ಹೆಚ್ಚು Chocolate ಕೊಡಬಹುದೆಂದು. ನಿಮ್ಮ Pantsನಲ್ಲಿ ಕಳ್ಳ ಕಿಸೆಯಿದೆ ಎಂದು ಗೆಳೆಯರಿಗೆ ತೋರಿಸಿ ಬೀಗುತ್ತಿದ್ದೀರಿ. ಬಾಲ್ಯ ಅಂದರೆ ಹಾಗೇನೇ, ಅಮ್ಮನ ಜೊತೆ ಬಟ್ಟೆ ಅಂಗಡಿಗೆ ಬಟ್ಟೆ ಖರೀದಿಸಲು ಹೋದಾಗ ಬಣ್ಣ ಯಾವುದೇ ಇರಲಿ, ಮೌಲ್ಯ ಯಾವುದೇ ಇರಲಿ Pantsನಲ್ಲಿ ನಮ್ಮ ಆಯ್ಕೆ ಯಾವಾಗಲೂ ಹೆಚ್ಚು ಜೇಬಿನದ್ದಾಗಿರುತ್ತದೆ. ಸೊಂಟಕ್ಕೆ $ Symbolನ ತಿರುಗಣಿಯ Belt. ನಂತರದ ದಿನಗಳಲ್ಲಿ Chain Pants, PONDS Powder ಹಚ್ಚಿ ಶಾಲೆಗೆ ಬರುತ್ತಿದ್ದೆವು. ಹುಡುಗಿಯರು ಅಂದ್ರೆ ಅಲರ್ಜಿ. ನಮ್ಮನ್ನು ಯಾರಾದರು ಹುಡುಗಿಯರ ಬೆಂಚ್ ಗೆ ದೂಡಿಹಾಕಿದರೆ ನಮ್ಮ ಪುರುಷತ್ವವೇ ನಾಶವಾದಂತೆಯೇ ಸರಿ. ಪುಸ್ತಕಗಳಿಗೆ ಖಾಕಿ Bindನ ಮೇಲೆ WWE Label, ಹೂವಿನ Label ಅಂಟಿಸುವಂತಿಲ್ಲ. Birthday Chocolate ಹುಡುಗರಿಗೆ ಕೈಯಲ್ಲಿ, ಹುಡುಗಿಯರಿಗೆ Deskನ ಮೇಲೆ ಇಡುವು...