Those Days of Birth Days



         ಈ ದಿನ ಏನೋ ವಿಶೇಷವಾಗಿದೆ. ಶಾಲಾ Prayer Assemblyಯಲ್ಲಿ ಎಲ್ಲರೂ ನಿಮ್ಮನ್ನೇ 
ನೋಡುತ್ತಿದ್ದಾರೆ. ನಿಮ್ಮ ಧರಿಸು ಎಂದಿನಿಂದ ವರ್ಣಮಯವಾಗಿದೆ. ಪ್ರತಿದಿನವೂ ನೀಲಿ ಚಡ್ಡಿಯಲ್ಲಿರುತ್ತಿದ್ದ ನೀವು ಅಂದು ಅದ್ಯಾವುದೋ ಹೆಚ್ಚು ಜೇಬುಗಳಿರುವ Pants ತೊಟ್ಟಿದ್ದೀರಿ. 
ತರಗತಿಯಲ್ಲಿಟ್ಟ Bagನಲ್ಲಿ ಅಪ್ಪ ಬರುವಾಗ ಪೇಟೆಯಿಂದ ತೆಗೆದುಕೊಟ್ಟ Chocolate Packet. ನಿಮ್ಮ ಸುತ್ತಲೂ ಗೆಳೆಯರು ನಿಂತುಕೊಂಡಿದ್ದಾರೆ. ನೀವು ಒಂದಾದರೂ ಹೆಚ್ಚು Chocolate ಕೊಡಬಹುದೆಂದು. ನಿಮ್ಮ Pantsನಲ್ಲಿ ಕಳ್ಳ ಕಿಸೆಯಿದೆ ಎಂದು ಗೆಳೆಯರಿಗೆ ತೋರಿಸಿ ಬೀಗುತ್ತಿದ್ದೀರಿ. ಬಾಲ್ಯ ಅಂದರೆ ಹಾಗೇನೇ, ಅಮ್ಮನ ಜೊತೆ ಬಟ್ಟೆ ಅಂಗಡಿಗೆ ಬಟ್ಟೆ ಖರೀದಿಸಲು ಹೋದಾಗ ಬಣ್ಣ ಯಾವುದೇ ಇರಲಿ, ಮೌಲ್ಯ ಯಾವುದೇ ಇರಲಿ Pantsನಲ್ಲಿ ನಮ್ಮ ಆಯ್ಕೆ ಯಾವಾಗಲೂ ಹೆಚ್ಚು ಜೇಬಿನದ್ದಾಗಿರುತ್ತದೆ. ಸೊಂಟಕ್ಕೆ $ Symbolನ ತಿರುಗಣಿಯ Belt.  ನಂತರದ ದಿನಗಳಲ್ಲಿ Chain Pants, PONDS Powder ಹಚ್ಚಿ ಶಾಲೆಗೆ ಬರುತ್ತಿದ್ದೆವು. ಹುಡುಗಿಯರು ಅಂದ್ರೆ ಅಲರ್ಜಿ. ನಮ್ಮನ್ನು ಯಾರಾದರು ಹುಡುಗಿಯರ ಬೆಂಚ್ ಗೆ ದೂಡಿಹಾಕಿದರೆ ನಮ್ಮ 
ಪುರುಷತ್ವವೇ ನಾಶವಾದಂತೆಯೇ ಸರಿ. ಪುಸ್ತಕಗಳಿಗೆ ಖಾಕಿ Bindನ ಮೇಲೆ WWE Label, ಹೂವಿನ 
Label ಅಂಟಿಸುವಂತಿಲ್ಲ. Birthday Chocolate ಹುಡುಗರಿಗೆ ಕೈಯಲ್ಲಿ, ಹುಡುಗಿಯರಿಗೆ Deskನ ಮೇಲೆ ಇಡುವುದು. ಅದೇನೋ ಆ ವಯಸ್ಸಿನ ವಿಶೇಷ ಮೈಲಿಗೆ! 

 Teacher ಹಾಜರಿ ಕರೆದದ್ದೇ ತಡ, ಎಲ್ಲರೂ Madamಗೆ ಕೂಗಿ ಹೇಳುತ್ತಿದ್ದಾರೆ. ಇಂದು ನಿಮ್ಮ 
Birth Day ಎಂದು. Teacher ನಿಮ್ಮನ್ನು Tableನ ಹತ್ತಿರ ನಿಲ್ಲಿಸಿದ್ದಾರೆ. ನಿಮ್ಮ ಸಹಪಾಠಿಗಳಿಂದ ಅರ್ದಂರ್ದ Happy Birth Day ಹಾಡು. ಅದು ಯಾರದ್ದೋ ಬಳಿಯಿದ್ದ ತುಕ್ಕುಹಿಡಿದ Super Max Bladeನಿಂದ ನಿಮ್ಮ Chocolate Pack Open ಮಾಡಿದ್ದೀರಿ. ಎಲ್ಲರಿಗೂ ಹಂಚಿಯಾಯಿತು. ಬೇರೆ ತರಗತಿಯ ಅದ್ಯಾಪಕರಿಗೆ ಕೊಡಲು ನಿಮ್ಮ ಜೊತೆಯಲ್ಲಿ ನಿಮ್ಮ ಆಪ್ತ ಗೆಳೆಯ. ಎಲ್ಲಾ ತರಗತಿಗಳಿಗೆ ಸವಾರಿ. ಅದ್ಯಾಪಕರಿಗೆ 2, HMಗೆ E! 

        ಆ ದಿನ ಎಷ್ಟು ತಪ್ಪು ಮಾಡಿದರೂ, Copy ಬರೆಯದಿದ್ದರೂ ಯಾವುದೇ ಒದೆ ಇಲ್ಲ. ಹಾಗಂತ ಮರದ Scaleನ ಪೆಟ್ಟು ತಪ್ಪಿಸಲು ವರ್ಷಕ್ಕೆ ಐದಾರು ಬಾರಿ Birth Day ಮಾಡಿಸಿಕೊಂಡವರಿದ್ದಾರೆ.  ಮನೆಯಲ್ಲಿ ಬೇರೆಯೇ ಸಂಭ್ರಮ, ಈಗಿನಂತೆ  Cake Cut ಮಾಡುವ ದಿನಗಳಲ್ಲ. ಪೇಟೆಯಿಂದ 3KGಯ ಕೋಳಿ ತೆಗೆದು 2.4KG ಮಾಂಸದ ಸಾರಿನ ಗಮ್ಮತ್ತು ಅದು. ಚಿಕ್ಕಂದಿನಲ್ಲಿ ನನ್ನ Birth Dayಗೆ ಮನೆಯಲ್ಲೇ ಇದ್ದ 6KGಯ ಗಿರಿರಾಜ ಕೋಳಿ ಸಾರು ಮಾಡಿದ್ದರಂತೆ. ಅಂದಿನ ದಿನಕ್ಕೆ ಅದೊಂದು ವಿಶೇಷ. ಅಂದು ನಮಗೆ ಮನೆಯಲ್ಲೂ ಒದೆ ಇಲ್ಲ. ಅದೃಷ್ಟವಶಾತ್ ಯಾವುದೋ ಕಮ್ಮ್ಯುನಿಷ್ಟ್ ಗಿಡದ ಆಯಸ್ಸು ಒಂದು ದಿನ ಹೆಚ್ಚಾಗುತ್ತಿತ್ತು. 

       High School ಮೆಟ್ಟಿಲು ಹತ್ತುತ್ತಿದ್ದಂತೆ Birth Day ಹುಚ್ಚು ಕ್ಷೀಣಿಸತೊಡಗುತ್ತದೆ. ಶಾಲೆಯ ಸಮವಸ್ತ್ರದ ನಡುವೆ ಬಣ್ಣದ ಧರಿಸು ತೊಡುವುದೇ ಒಂದು ಮುಜುಗರ. 50p, Rs.2 Chocolate ಜಾಗಕ್ಕೆ Munch, Dairy Milk shots ಬಂದಿತ್ತು. ಮತ್ತೆ PUCಯಲ್ಲಿ Birth Day ಸುದ್ದಿ ತೆಗೆಯಬೇಕೆಂದರೆ ಬೆನ್ನು ಗಟ್ಟಿಬೇಕು. 

ನಿಮ್ಮ Birth Day ಎಂದು ಪ್ರಚಾರವಾದೊಡನೆ ನಿಮ್ಮ ಗೆಳೆಯರು ಮುಗಿಬಿದ್ದು ನಿಮ್ಮ ಬೆನ್ನಿನಲ್ಲಿ ಬಟ್ಟೆ ಒಗೆಯುತ್ತಾರೆ. ತಪ್ಪು ಪ್ರಚಾರದಿಂದ ಧರ್ಮಕ್ಕೆ ಪೆಟ್ಟು 
ತಿಂದವರಿದ್ದಾರೆ. Sunday ಬಂದ Birth Dayಯನ್ನು Monday ಒಗೆಸಿಕೊಂಡವರಿದ್ದಾರೆ. ಈಗಂತು Pantsನಲ್ಲಿ ಲೆಕ್ಕದ ಜೇಬಿದ್ದರೆ ಸಾಕು. Shirtನಲ್ಲಿ ಒಂದಕ್ಕಿಂತ ಹೆಚ್ಚು ಜೇಬಿರಬಾರದು. ಪದವಿಯಲ್ಲಿ College ಸಮವಸ್ತ್ರದಲ್ಲೇ ಎಲ್ಲಾ. Egg Bath, Cake wash ಎಲ್ಲವೂ. ಇಂತಹ ಆಚರಣೆಗಳನ್ನು ಅದೆಷ್ಟೋ Cafeಗಳು ಬಂಡವಾಳವನ್ನಾಗಿಸಿವೆ. ಗೆಳೆಯರಿಗೆ Party ಮತ್ತು ಬೇರೆ ಗೆಳೆಯರ Party ತಿಂದು ನಮ್ಮ ಮೇಲಿರುವ ಋಣ. Birth Day ಎಂದರೆ ಸಾಕು Party ಎಂದು 
ಕೇಳುವವರು. ನಿಮ್ಮ ಅವಸ್ಥೆಯ Photo, Video Statusಹಾಕುವವರು. 
 ವಾಸ್ತವದಲ್ಲಿ ಇವರೆಲ್ಲರೂ ನಿಮ್ಮ ಹಿತವನ್ನು ಬಯಸುತ್ತಾರೆಯೇ ಅಥವಾ ಆ ದಿನ ಅವರಿಗೆ ವಿನೋದವಾಗಿರಲು ನೀವು ಕಾರಣವಾಗಿದ್ದೀರೆ? ನೀವು ಯಾವಾಗಲಾದರೂ ಸಾಮಾಜಿಕ ಜಾಲತಾಣದಿಂದ ನಿಮ್ಮ ಹುಟ್ಟಿದ ದಿನವನ್ನು ಅಳಿಸಿ ನೋಡಿದ್ದೀರ? Birth Day ಒಂದು ನಿಮ್ಮ ಬದುಕಿಗೆ ಶುಭ ಆಶಯವೇ ಅಥವಾ ಆಧುನಿಕ ಜೀವನ ಶೈಲಿಯ ಭಾಗವಾಗಿದೆಯೇ? ನಾವು ಯಾಕೆ ನಮ್ಮ Birth Dayಯನ್ನು ಮಾನದಂಡವನ್ನಾಗಿ ಬಳಸುತ್ತಿದ್ದೇವೆ? ಯಾರು ಯಾರು ನಮಗೆ Wish ಮಾಡಲಿಲ್ಲ, ಯಾರು ನಮ್ಮ Birth day wish status ಹಾಕಲಿಲ್ಲ? ಇಂತಹ ಚಿಂತೆಗಳಿಂದ ನಾವು ಹೊರಬರುವುದು ಯಾವಾಗ? ಅವನು ನನ್ನ status ಹಾಕಲಿಲ್ಲ, ನಾನು ಹಾಕಬೇಕೋ ಬೇಡವೋ ಎಂಬ ಗೊಂದಲ. ಇವರೆಲ್ಲರ ನಡುವೆ "ನಾಳೆ ನನ್ನ Birth Day ಮರೆ, Status ಹಾಕು ಆಯ್ತ" ಎನ್ನುವ ಅಪರೂಪದ ಹುಚ್ಚರು. ಪ್ರೀತಿಸಿದವರು Birth Day wish ಮಾಡಲಿಲ್ಲವೆಂದುಆತ್ಮಹತ್ಯೆ ಮಾಡಿಕೊಂಡವರಿದ್ದಾರೆ. Birth Day Wish ಅನ್ನು ಪ್ರೀತಿಯ ಮಾನದಂಡವನ್ನಾಗಿಸಿದವರಿದ್ದಾರೆ. ನಾವು ಯಾಕೆ ನಮ್ಮ ಸಂಬಂಧಗಳನ್ನು ಮಾನದಂಡಗಳಿಗೆ ಬಲಿ ಕೊಡಬೇಕು? ಇದು ನಿಮ್ಮ ಆತ್ಮೀಯತೆಯ ಅಳತೆಮಾನವಲ್ಲ. ನಿಮ್ಮ ಪ್ರೀತಿ, ನಿಮ್ಮWallನ ಅಥವಾ ಇತರ ವ್ಯಕ್ತಿಗಳ Status ನೋಡಿ ನಕಲು ಮಾಡಿ ಹಾಕಿದ Statusನಲ್ಲಿದೆಯೇ ಅಥವಾ ಆ ವ್ಯಕ್ತಿಯ ಮೇಲಿನ ವಿಶ್ವಾಸದಲ್ಲಿಯೇ? ನೆನಪಟ್ಟುಕೊಳ್ಳಿ, ಅನುರಾಗ, ಸಂಬಂಧಗಳು ನಿಂತಿರುವುದು ನಂಬಿಕೆ ಮತ್ತು ಭಾವನೆಗಳಿಂದಲೇ ಹೊರತು ಗೊಡ್ಡು ತೋರ್ಪಡಿಕೆಯ ಆಶಯಗಳಿಂದಲ್ಲ.  ನಿಮಗೆ ಹೊರೆಯೆನಿಸಬಹುದು, ಒಂದು ವರ್ಷ ನಿಮ್ಮ Wallನಿಂದ ಹುಟ್ಟಿದ ದಿನ ಅಳಿಸಿ ನೋಡಿ. ಯಾರು ನಿಮ್ಮ ಹುಟ್ಟುಹಬ್ಬದ ಆಶಯ ಬಯಸುತ್ತಾರೆಂದು. ನಿಮ್ಮ ಹುಟ್ಟಿದ ದಿನವೇನೂ ವಿಶೇಷವಾಗಿರುವುದಿಲ್ಲ. ಸೂರ್ಯನ ಚಲನೆ ಎಂದಿನಂತಿರುತ್ತದೆ. ಎಲ್ಲರೂ ಅವರವರಾಗಿರುತ್ತಾರೆ. ನಾನು ಕಳೆದೆರಡು ವರ್ಷದಿಂದ ಇದನ್ನು ಅನುಭವಿಸುತ್ತಿದ್ದೇನೆ. Calender, ದಾಖಲೆಗಳ ಹೊರತಾಗಿ ನಾನು ಇಬ್ಬರಿಂದ ಮಾತ್ರವೇ ಹುಟ್ಟುಹಬ್ಬದ ಶುಭಾಶಯವನ್ನು ಪಡೆಯುತ್ತೇನೆ. ಒಂದು ನನ್ನ ಹೆತ್ತ ತಾಯಿ, ಇನ್ನೊಂದು ನನ್ನ ಅತ್ತೆ. ಬಹುಶಃ ನನ್ನ ತಾಯಿಗೆ ಪುರುಸೋತ್ತಿಲ್ಲದಾಗ ಅವಳೇ ನನ್ನನ್ನು ಎತ್ತಿ ಆಡಿಸಿರಬೇ ಕು.


  ©✍️ Ashith Rai T @ Karnoor Bava Blog





Comments

Post a Comment

Please write your comments, suggestions and feedback.

Popular posts from this blog

ಬಂದ ದಾರಿ ಬದಲಾಗಿತ್ತು !!