ನೀವು ಆನ್‌ಲೈನ್‌ನಲ್ಲಿರುವುದು ಯಾರಿಗೂ ತಿಳಿಯಬಾರದೇ? ವಾಟ್ಸಾಪ್ ಪರಿಚಯಿಸಲಿದೆ ಹೊಸ ವೈಶಿಷ್ಟ್ಯ
ಬಹಳ ದಿನಗಳಿಂದ ಬಳಕೆದಾರರ ಬೇಡಿಕೆ ಆಗಿದ್ದ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ವಾಟ್ಸಾಪ್ ಸಿದ್ಧತೆ ನಡೆಸಿದೆ. ಈ ಹೊಸ ಫೀಚರ್ ವಾಟ್ಸಾಪ್ ಬಳಕೆದಾರರ ನೆಚ್ಚಿನ ವೈಶಿಷ್ಟ್ಯವಾಗಲಿದೆ. ವಾಟ್ಸಾಪ್ ಹೊಸ ವೈಶಿಷ್ಟ್ಯ : ಪ್ರಪಂಚದಾದ್ಯಂತದ ಬಳಕೆದಾರರ ಹೃದಯವನ್ನು ಗೆದ್ದಿರುವ ವಾಟ್ಸಾಪ್ ಬಳಕೆದಾರರ ಬಹು ದಿನಗಳ ಬೇಡಿಕೆ ಆಗಿದ್ದ ಹೊಸ ಫೀಚರ್ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ವಾಟ್ಸಾಪ್ ಹೊಸ ವೈಶಿಷ್ಟ್ಯವು ನಿಮ್ಮ ಆನ್‌ಲೈನ್ ಸ್ಟೇಟಸ್ ಅನ್ನು ಮರೆಮಾಡಲು ಸಹಕಾರಿ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ವೈಶಿಷ್ಟದ ವಿಶೇಷತೆ ಏನು? ಅದನ್ನು ಹೇಗೆ ಬಳಸುವುದು ಎಂದು ತಿಳಿಯೋಣ... ಏನಿದು ವಾಟ್ಸಾಪ್ ಹೊಸ ಫೀಚರ್? ವಾಟ್ಸಾಪ್ ಶೀಘ್ರದಲ್ಲೇ ಬಳಕೆದಾರರು ತಮ್ಮ ಆನ್‌ಲೈನ್ ಸ್ಥಿತಿಯನ್ನು ಮರೆಮಾಡಲು ಅನುಮತಿಸುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. WABetaInfo ಈ ವೈಶಿಷ್ಟ್ಯದ ಬಗ್ಗೆ ಮಾಹಿತಿ ನೀಡಿದೆ. ಅದಾಗ್ಯೂ, ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ . ಈ ಹೊಸ ಫ್ಯೂಚರ್ ಸಹಾಯದಿಂದ ಬಳಕೆದಾರರು ಯಾವಾಗ ಬೇಕಾದರೂ ಯಾರಿಗಾದರೂ ಸಂದೇಶವನ್ನು ಕಳುಹಿಸಬಹುದು. ಇದರ ವಿಶೇಷತೆ ಎಂದರೆ ನೀವು ಆನ್‌ಲೈನ್‌ನಲ್ಲಿದ್ದೀರಾ ಅಥವಾ ಇಲ್ಲವೇ ಎಂದು ಬೇರೆಯವರಿಗೆ ತಿಳಿಯುವುದಿಲ್ಲ. ವಾಟ್ಸಾಪ್‌ನಲ್ಲಿ ಸ್ವಲ್ಪ ಸಮಯದವರೆಗೆ ಪ್ರೊಫೈಲ್ ಫೋಟೋ, ಸ್ಟೇಟಸ್ ಮತ್ತು ಲಾಸ್ಟ್ ಸೀನ್ ಅನ್ನು ಮರೆಮಾಡುವ ಆಯ್ಕೆ ಲಭ್ಯವಿದೆ. ಆದರೆ, ಆನ್‌ಲೈನ್ ಸ್ಥಿತಿಯನ್ನ...