ರಾಜ್ಯ ಕಂಡ ಬೆಳಕಿನ ವಿಸ್ಮಯಕ್ಕೆ ಕಾರಣ 'ಎಲೋನ್ ಮಸ್ಕ್'!..ನೀವು ತಿಳಿಯದ ಮಾಹಿತಿ!
Bhaskar N J | Vijaya Karnataka Web | Updated: Dec 21, 2021, 9:24 AM ಸ್ಯಾಟ್‌ಲೈಟ್ ಇಂಟರ್ನೆಟ್ ಒದಗಿಸುವುದಕ್ಕಾಗಿ ಸ್ಪೇಸ್ ಎಕ್ಸ್ (SpaceX) ನೆನ್ನೆ ಕ್ಯಾಲಿಫೋರ್ನಿಯಾ ಹತ್ತಿರದ ಉಡಾವಣೆ ಕೇಂದ್ರದಿಂದ 52 ಸ್ಟಾರ್‌ಲಿಂಕ್ (Starlink) ಸ್ಯಾಟ್‌ಲೈಟ್‌ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸ್ಟಾರ್ ಲಿಂಕ್ ಎಂಬ ಯೋಜನೆಯಡಿ ಈಗಾಗಲೆ 1,800ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಅವುಗಳಲ್ಲಿ 1,732 ಉಪಗ್ರಹಗಳು ತಮ್ಮ ನಿಗದಿತ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ. ರಾಜ್ಯದಲ್ಲಿ ನೆನ್ನೆ ಸಂಜೆ 7ರಿಂದ 8 ಗಂಟೆ ಅವಧಿಯಲ್ಲಿ ಆಗಸದಲ್ಲಿ ಸಕ್ಷತ್ರಗಳು ಚಲಿಸುವಂತಹ ಬೆಳಕಿನ ಸರಮಾಲೆ ಕಂಡು ಬಂದು ಬೆರಗು ಮೂಡಿಸಿದ ವಿಷಯ ಬಹುತೇಕ ಎಲ್ಲರಿಗೂ ತಿಳಿದಿದೆ ಎನ್ನಬಹುದು. ನಕ್ಷತ್ರಗಳು ಒಂದು ರೇಖೆಯಲ್ಲಿ ಚಲಿಸುತ್ತಿರುವಂತೆ ಕಂಡು ಬಂದ ವಿಸ್ಮಯಕ್ಕೆ ಎಲ್ಲರೂ ಒಮ್ಮೆ ಮೂಕವಿಸ್ಮಿತರಾಗಿದ್ದರು. ಆದರೆ, ಇದಕ್ಕೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿದೆ. ಸ್ಯಾಟ್‌ಲೈಟ್‌ಗಳ ಮೂಲಕ ಜಗತ್ತಿನ ಎಲ್ಲ ಕಡೆಯೂ ಇಂಟರ್ನೆಟ್ (Internet) ಸೇವೆಯನ್ನು ಒದಗಿಸುವ ಗುರಿಯನ್ನು ಹಾಕಿಕೊಂಡಿರುವ ಎಲಾನ್ ಮಸ್ಕ್ (Elon Musk) ಒಡೆತನದ ಸ್ಪೇಸ್ ಎಕ್ಸ್ (SpaceX) ಸಂಸ್ಥೆಯು ಉಡಾವಣೆ ಮಾಡಿರುವ ಸರಣಿ ಉಪಗ್ರಹಗಳ ಸರಮಾಲೆ ಇದಾಗಿದ್ದು, ಉಪಗ್ರಹಗಳು ಸಾಮಾನ್ಯ ಜನರಿಗೂ ಬರಿಗಣ್ಣಿಗೆ ಕಾಣಿಸುವಂತೆ ಕಕ್ಷೆಯನ್ನು ಸೇರಿವೆ.! ಸ್ಯಾಟ್‌ಲೈಟ್ ಇಂಟರ್ನೆ...