Kolikamale ; The Unknown peak
  ಇದು ಮೂರನೆಯದಾಗಿ ಬಂದ ಹೆಸರು, ಮೊದಲು ಗಡಾಯಿಕಲ್ಲು, ನಂತರ ಕಾಸರಗೋಡಿನ ರಾಣಿಪುರಂ ಪ್ರಸ್ತಾಪವಾಗಿತ್ತು. ಜಾಗ ಯಾವುದಾದರೇನು ಮಜಾ ಮಾಡೋದರಲ್ಲಿರೋದು. ಮೂರು ಜಾಗಗಳು ಚಾರಣದ ಸ್ಥಳಗಳೇ.ಮೂರನೆಯದ್ದು ಹೊರ ಜಗತ್ತಿಗೆ ಅಷ್ಟು ತೆರೆದುಕೊಂಡಿಲ್ಲ. ಆ ಊರಿನವರಿಗೆ ಮಾತ್ರವೇ ಅದರ ಜ್ಞಾನ. ಅದಿರೋದು ನನ್ನ Friend ಮೋಕ್ಷಿತ್‌ನ ಊರಿನಲ್ಲಿ.OK,  ಜಾಗ ಪಕ್ಕಾ ಆಯ್ತು. ಯೋಜನೆಗಳು ರೂಪಿತಗೊಂಡಿದ್ದು ಮೂರು ದಿನದ ವಜ್ರಮಹೋತ್ಸವದ ಹಿಂದಿನ ದಿನ, ಏಳು ಜನರ ಪಟ್ಟಿ ಸಿದ್ಧವಾಯಿತು. ಸಂಜೆ ಪರೋಟಕ್ಕೆ ಆರ್ಡರ್ ಕೂಡ ಆಯಿತು. ಬೆಳಗ್ಗೆ ನಾನು ಮತ್ತು ಪ್ರಸಾದ Mahindra  Duro ದಲ್ಲಿ ಸುಳ್ಯ ದತ್ತ ಹೊರಟೆವು. ಸುಳ್ಯ ತಲುಪಿದ ನಾವು Duro ಅನ್ನು Bus Standನ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿ ಅವಿನಾಶ್‌ಗೆ ಕರೆ ಮಾಡಿದಾಗ, ಸಾಯಿನಾಥ್ ಆಗಲೇ ಸುಳ್ಯಕ್ಕೆ ತಲುಪಿದ್ದು, ನಮಗಾಗಿ  Bus Standನಲ್ಲಿ ಕಾಯುತ್ತಿದ್ದಾನೆಂದು ತಿಳಿಯಿತು. ನಂತರ Bus Standನಲ್ಲಿ ಸಾಯಿನಾಥ್‌ನನ್ನು ಸಂಧಿಸಿ, ಮೂರು ಜೋಡಿ ಕುರ್ಚಿಗಳಿರುವೆಡೆಗೆ ಹೆಜ್ಜೆಹಾಕಿ ಆಸೀನರಾದೆವು. ನಂತರದ 30 ನಿಮಿಷಗಳಲ್ಲಿ ಅವಿನಾಶ್ ಬಂದ, ಕೆಲವು ನಿಮಿಷಗಳ ನಂತರ ಮೋಕ್ಷಿತ್ ತಾನು ಜೀಪಿನಲ್ಲಿ ಬಂದಿರುವುದಾಗಿ ತಿಳಿಸಿದ. ಮೋಕ್ಷಿತ್‌ನ ಜೀಪು ಹತ್ತಿದ ನಾವು ಪರಗೇಟ್ ನಲ್ಲಿರುವ ಅವರ ಬಾಡಿಗೆ ಮನೆಯಿಂದ ನೀರಿನ ಬಾಟಲಿಗಳನ್ನು ಸಿದ್ಧಪಡಿಸಿದಾಗ ಅಲ್ಲಿಗೆ ಪ್ರಜ್ವಲ್ ಮತ್ತು ಅಭಿಷೇಕ್ ಬೈಕ...