Trail of an Elephant
ಅಂತು January 19, 2020ರಂದು ನಮಗೊಂದು ಮುಹೂರ್ತ ಬಂತು. ಎಲ್ಲರೂ ಬೆಳಗ್ಗೆ Bikeನಲ್ಲಿ ಬಂದು ಮೋಕ್ಷಿತ್ ನ ಸುಳ್ಯದ ಬಾಡಿಗೆ ಮನೆಯಲ್ಲಿ ಜಮಾವಣೆಗೊಂಡೆವು. ಬರುವವರನ್ನು ಕಾದು, ಎಲ್ಲರೊಡಗೂಡಿ ಪೆರಾಜೆಯತ್ತ ಮುಖಮಾಡಿದೆವು. 6 km ದೂರದ ಪೆರಾಜೆಯಿಂದ ಇನ್ನೂ 9km ಅಂಡಿಗುಂಡಿ Road, ತಾರಮರ ತಿರ್ಗಸ್, ಯಮನಗುಂಡಿಯಂತಿರುವ
ರಸ್ತೆ ಬದಿಗಳು. ಇವೆಲ್ಲವನ್ನು ಸೀಳಿ ಮೋಕ್ಷಿತ್ ನ ಇಲ್ಲ್ ತ ನೆರಳಿನಲ್ಲಿ Bike ನಿಲ್ಲಿಸಿದಾಗ ಅವನ 'Daddy' ನಮ್ಮನ್ನು ಆದರದಿಂದ ಬರಮಾಡಿಕೊಂಡರು. ಕುರ್ಸಿನಲ್ಲಿ
ಕೂತೊಡನೆ Order ತೆಗೆದುಕೊಂಡು ಚಹಾ ಮತ್ತು, ನಾನು ಚಹಾ ಕುಡಿಯುವುದಿಲ್ಲವಾದುದರಿಂದ ಹಾಲು ಬಂತು. ನಂತರ ನಮ್ಮ ಪಯಣ Jeep ನಲ್ಲಿ ಮೋಕ್ಷಿತ್ ನ Daddyಯ ಜೊತೆ ನಿಡ್ಯಮಲೆ ಜಲಪಾತದತ್ತ. ಜಲಪಾತದ ಹತ್ತಿರವಿರುವ ಮನೆಯಲ್ಲಿ Jeep ನಿಲ್ಲಿಸಿದ ನಾವು ಒಂದು ಚೆಂಬು ನೀರು ಕುಡಿದು ಚಾರಣ ಪ್ರಾರಂಭಿಸಿದವು.
ಮೇಲ್ಮುಖ ಇಳಿಜಾರಿನಲ್ಲಿರುವ ಅಡಿಕೆ ತೋಟವನ್ನು ಭೇದಿಸಿ, ಪಾಪು ದಾಟಿ ಕಾಡನ್ನು ಪ್ರವೇಷಿಸಿದೆವು.ಮುಂದಿನಿಂದ ಮೋಕ್ಷಿತ್‌ನ Daddy ದಾರಿ ಮಾಡಿಕೊಡುತ್ತಿದ್ದರು. ಎಲ್ಲಿ ನೋಡಿದರಲ್ಲಿ ಬಂಡೆ ಕಲ್ಲುಗಳು, ಅದರ ಮೇಲೆ ಚೆಂಡತ ಮುಳ್ಳು.
ಹತ್ತಿ ಹತ್ತಿ ಮಧ್ಯದಲ್ಲಿ 'ಬಚ್ಚಿರಜ್ಜೈ' ತಿಂದು ದಣಿವಾರಿಸಿಕೊಂಡು.
ಅಡಿಕೆ ತಲೆಯ ಅಧಿಕಾರ ಹಿಡಿದಾಗ Gravity ಹೆಚ್ಚಾಗತೊಡಗಿತು. ಇನ್ನೂ 10m ಬಂಡಿಕಲ್ಲುಗಳನ್ನು ಹತ್ತಿದಾಗ ನಿಡ್ಯಮಲೆ ಜಲಪಾತದ ದರ್ಶನವಾಯಿತು.
ಇನ್ನೂ ಮೇಲಕ್ಕೆ ತುತ್ತ ತುದಿಗೆ ಹೋಗಲು ಪ್ರಯತ್ನಿಸಿದರೆ ಕಲ್ಲು-ಮುಳ್ಳು ಜೋಡಿ ನಮ್ಮನ್ನು ಬಿಡಲಿಲ್ಲ. ತುದಿಯಲ್ಲಿ ಕಾಡು ಸಮತಟ್ಟು ಇರುವುದರಿಂದ ಆನೆಗಳ ಹಾವಳಿ ಸಂಭವವೂ ಇರುತ್ತದೆ. ನೀರು ಕಡಿಮೆ ಇದ್ದಿದ್ದರಿಂದ ಅಲ್ಲೇ ಹೆಚ್ಚು ಸಮಯ ಕಳೆಯಲಿಲ್ಲ.
ಸಮಯ ಇನ್ನೂ ಹೆಚ್ಚಿರುವುದರಿಂದ ಮಧ್ಯಾಹ್ನದ ಊಟದ ನಂತರ ಕೋಳಿಕಮಲೆ ಕ್ಕ್ ಪೋಪುನೆ ಎಂದು ತೀರ್ಮಾನಿಸಿದೆವು.
ಅದೇ ದಾರಿಯಲ್ಲಿ ಇಳಿಯುತ್ತಾ ಮುಳ್ಳುಹಂದಿಯ ಗುಹೆಯೊಳಗೆ ಇಣುಕುತ್ತಾ, ಒಣ ಎಲೆಗಳ ಮೇಲೆ ಕಾಲಿರಿಸಿದ ಜಾರುತ್ತಾ ಜೀಪು ಇಟ್ಟಿದ್ದ ಮನೆಗೆ ಹಿಂತಿರುಗಿದ.ಅಲ್ಲಿದ್ದ ಮೂರು ನಾಯಿ ಗಳಲ್ಲಿ ಒಂದಾದ ಮರಿಯು ಎಲ್ಲರ ಗಮನ ಸೆಳೆಯಿತು.
ನೀರು ಕುಡಿದು Jeep ಹತ್ತಿದ ನಾವು 12:30ಕ್ಕೆ ಮೋಕ್ಷಿತ್ ನ ಮನೆ ತಲುಪಿದೆವು. ಆತನ ತಾಯಿ 01:00 ಗಂಟೆಯಾಗಬಹುದೆಂದು ಭಾವಿಸಿದ್ದರಂತೆ, ಬಹುಶಃ ನೀರು ಹೆಚ್ಚಿರುತ್ತಿದ್ದರೆ ಅಷ್ಟು ಸಮಯವಾಗುತ್ತಿತ್ತೋ ಏನೋ? ಕೋಳಿ ಸುಕ್ಕ ದೊಂದಿಗಿನ ಬಾಳೆಲೆ ಊಟ ತುಂಬಾ ರುಚಿಯಾಗಿತ್ತು.ಜೀರ್ಣಕ್ಕೆ ಅನುಕೂಲವಾಗಲು ಪಂರ್ದ್.ಜೇಸನ್ ಮತ್ತು ಅವಿನಾಶ್ ಕೋಳಿಕಮಲೆಯಲ್ಲಿ ತಿನ್ನಲೆಂದು ಪೆರಾಜೆಯ ಅಂಚಿನಿಂದ Snacks ತಂದರು. ಮತ್ತೆ ನೀರಿನ Bottle ತುಂಬಿಸಿಕೊಂಡು Jeep ಹತ್ತಿ ಕೋಳಿಕಮಲೆಯತ್ತ ಪಯಣ, 1/2 ಗಂಟೆ ದಾರಿ ನಂತರ ಮಲೆ ಮುದೇಲಿನಲ್ಲಿ Jeep ನಿಲ್ಲಿಸಿ ಚಾರಣ ಪ್ರಾರಂಭಿಸಿದವು.ಕಾಡು ಪ್ರವೇಶಿಸುತ್ತಿದ್ದಂತೆ ಅದೇನೋ ವಾಸನೆ ಮೂಗು ಹತ್ತಿತು.ವಾಸನೆ ಕೊಂಚ ಹಂದಿ ಚರ್ಮದ ವಾಸನೆಯನ್ನು ಹೋಲುತ್ತಿತ್ತು. 100m - 150m ನಡೆದೊಡನೆ ವಾಸನೆ ಹೆಚ್ಚಾಯಿತು. ಈಗ Conform ಇದು ಆನೆ ಜಾಡು! ಆನೆ ಮತ್ತು ಹಂದಿಯು ಒಂದೇ ತರನಾದ ಚರ್ಮವನ್ನು ಹೊಂದಿರುತ್ತದೆ ಮತ್ತು ಇಂತಹ ಚರ್ಮಗಳಲ್ಲಿ ಬೆವರಿನ ವಾಸನೆ ಉಂಟಾಗುತ್ತದೆ.
"ಸುಮ್ಮನೆ Risk ಯಾಕೆ? ಇನ್ನೊಮ್ಮೆ ಬರುವ" ಎಂದು ಮೋಕ್ಷಿತ್ ನ Daddy ಆನೆ ದಾಳಿ ವೈಖರಿಗಳ ಬಗ್ಗೆ ವಿವರಿಸಿದರು. ಮನುಷ್ಯ ವಾಸನೆ ಗೋಚರವಾದೊಡನೆ, ಹಿಂಡಿನಲ್ಲಿರುವ ಹೆಣ್ಣಾನೆಗಳು ಘೀಳಿಟ್ಟು ತಮ್ಮ ಇರುವಿಕೆಯನ್ನು ಗೊತ್ತುಪಡಿಸುವುದು. ಒಂಟಿ ಸಲಗ ವಾದರೆ ಯಾವುದೇ ಚಲನೆ ಇಲ್ಲದೆ ನಿಂತಲ್ಲಿ ಸ್ತಬ್ಧವಾಗುತ್ತದೆ, ಮನುಷ್ಯರು ಹತ್ತಿರ ಬಂದೊಡನೆ ಘೀಳಿಟ್ಟು ದಾಳಿ ಮಾಡುತ್ತದೆ ಮತ್ತು ಫೀಳು ಎಷ್ಟು ಘೋರವಾಗಿರುತ್ತದೆ ಅಂದರೆ ನಮಗೆ ಭಯದಿಂದ ಮೂರ್ಛೆ ಹೋಗುವ ಸನ್ನಿವೇಶವೂ ಉಂಟಾಗುವ ಸಂಭವವಿದೆ.ಆದ್ದರಿಂದ ನಾವು ಹೋದ ದಾರಿಗೆ ಸುಂಕವಿಲ್ಲವೆಂದು ಹಿಂತಿರುಗಿದ. ಮೋಕ್ಷಿತ್ ನ Daddy ಮುಂದಿನ ದಿನ ನಿಗದಿ ಬಗ್ಗೆ ಹೇಳುತ್ತಾ, ಉತ್ಸಾಹ ಕಳೆದುಕೊಂಡಿದ್ದ ನಮ್ಮನ್ನು ಸಮಾಧಾನಗೊಳಿಸಿದರು. ಬರುವ ದಾರಿಯಲ್ಲಿದ್ದ ಶಾಲೆಯ ಬಯಲಿನಲ್ಲಿ Jeep ನಿಲ್ಲಿಸಿದೆವು. ಆದಿತ್ಯವಾರ ಆಗಿದ್ದರಿಂದ ಶಾಲೆ ಸ್ತಬ್ದವಾಗಿತ್ತು.
ಕೋಳಿಕಮಲೆಯಲ್ಲಿ ತಿನ್ನಲು ತಂದಿದ್ದ Kurkure, chips ಗಳು ಶಾಲೆಯ ಬಯಲಿನಲ್ಲಿ Open ಆದವು.
ನೀರಿನ Bottle ಗಳ ಮುಚ್ಚಳವು ತಿರುಗಲಾರಂಭಿಸಿತು. Snack Wrapper ಗಳನ್ನು ಕಜವುತ ಕುರ್ವೆಗ್ ಪಾಡ್ಯರ ಹೋದಾಗ ಮೋಕ್ಷಿತ್ ಒಂದು Cricket Bat ಕಂಡ, Snacks ತೊಟ್ಟೆಗಳು ಕಡ್ಲಾಸ್ Ball ಆಗಿ ಪರಿವರ್ತನೆಗೊಂಡಿತು. ಮತ್ತೆ Cricket ಪ್ರಾರಂಭ. ಕೆಲ ಹೊತ್ತಿನ ನಂತರ Ball ಶಾಲೆಯ Terrace ಮೇಲೆ ಬಿತ್ತು. ಅದನ್ನು ತರಲು ಪ್ರಸಾದ ಕಿಟಕಿಯ ಸಹಾಯದಿಂದ ಮೇಲ್ಛಾವಣಿಗೆ ಹತ್ತಿರದ, ಅಲ್ಲಿ ನೋಡಿದರೆ Volley Ball!
Volley Ball ಅಂತ್ಯಗೊಂಡಿದ್ದು ಅದೇ Ball ನಲ್ಲಿ Football ಆಡೋಣವೆಂದು ಹೊಳೆದಾಗ. Goal Point ಗೆ ವ್ಯವಸ್ಥೆಗಳು ಇರಲಿಲ್ಲ, ಆಶಿರ್ ಹೋಗಿ, ಮಕ್ಕಳಿಗೆ ಸಜ್ಜಿಗೆ ಬೇಯಿಸುವ ದಿಕ್ಕೆಲ್ ನ ಕಲ್ಲುಗಳನ್ನು ತಂದು Goal Post ಮಾಡಿದ. ನನ ಗೋಬ್ಬು ಸುರು. ನಾನು, Avinash, Mokshith ಮತ್ತು Jason ಒಂದು 'ಕರೆ'ಯಾದರೆ, Hashir, Likith, Prasad ಮತ್ತು Rajesh ಇನ್ನೊಂದು 'ಕರೆ'. ಪಂದ್ಯ 4 - 4 ಸಮಬಲವಾದುದ್ದರಿಂದ Penalty ಸುರ್ವಾಂಡ್. ಅಲ್ಲೂ ಸಮಬಲ, ನಮ್ಮ ಕಡೆಯಿಂದ Avinash ಮತ್ತು ಆ ಕಡೆಯಿಂದ Hashir ಉತ್ತಮ ಕ್ಷೇತ್ರರಕ್ಷಣೆ, Avinash ಸ್ವಲ್ಪ ಬಳಲಿದ ನಂತರ ನಾನು. ಒಂದು Kick ನನ್ನ ಕೈ ತಪ್ಪಿದರಿಂದ ನಾವು ಸೋತವು. ಮೊದಲೇ ತಡವಾಗಿದ್ದರಿಂದ ಆಟ ಮುಗಿದೊಡನೆ Jeep ಹತ್ತಿ Mokshith ಮನೆಗೆ ಹಿಂತಿರುಗಿದೆವು. Photo ಗಳನ್ನು Laptop, Pen Drive ಗಳಲ್ಲಿ ಹಂಚಿಕೊಂಡು ಮತ್ತೆ ನಮ್ಮ ಎರಡು ಕಾಲಿನ ಕುದುರೆ ಏರಿ ನಮ್ಮ ದಾರಿ ಹಿಡಿದೆವು. Penalty ಯಲ್ಲಿ Ball ನಿಜವಾಗಲೂ ನನ್ನ ಕೈತಪ್ಪಿತಾ? ಅಥವಾ ಮನೆ ತಲುಪಲು ಇನ್ನೂ ತಡವಾಗಬಹುದೆಂದು ನಾನು ಬಿಟ್ಟು ಬಿಟ್ಟೆ ಎಂದು ಅವರಿಗೆ ತಿಳಿದಿರಬಹುದಾ?
✍️ Ashith Rai T
Read More > > Karnoor Bava
Write a 👉 Comment
ಅತ್ಯಂತ ಸುಂದರ ಬರವಣಿಗೆ... ಮುಂದಿನ ಬರವಣಿಗೆಯ ಕಾತರ ನನ್ನಲ್ಲಿದೆ...
ReplyDeleteSuper nice writing superb story place photos also
Deleteಥಾಂಕ್ಯೂ..., ಖಂಡಿತ ನಿಮ್ಮ ಪ್ರತಿಕ್ರಿಯೆ ಸದಾ ಇರಲಿ...
Delete