ಯಾರ ಹಸ್ತದಲ್ಲಿ ಈ ರೇಖೆ ಸಂಪೂರ್ಣ ರೂಪದಲ್ಲಿರುತ್ತದೆಯೋ ಅವರಿಗೆ ಜೀವನದಲ್ಲಿ...
ಯಾರ ಹಸ್ತದಲ್ಲಿ ಈ ರೇಖೆ ಸಂಪೂರ್ಣ ರೂಪದಲ್ಲಿರುತ್ತದೆಯೋ ಅವರಿಗೆ ಜೀವನದಲ್ಲಿ ಸಿಗುತ್ತದೆ ಭಾರೀ ಯಶಸ್ಸು
image © zeenews.india.com |
ಅಂಗೈಯಲ್ಲಿನ ಮಧ್ಯದ ಬೆರಳಿನ ಕೆಳಗಿನ ಭಾಗವನ್ನು ಶನಿ ಪರ್ವತ ಎಂದು ಕರೆಯಲಾಗುತ್ತದೆ. ಶನಿ ಪರ್ವತವು ಕೈಯಲ್ಲಿ ಮಂಗಳಕರ ಸ್ಥಾನದಲ್ಲಿದ್ದರೆ, ಅದು ವ್ಯಕ್ತಿಯನ್ನು ಅಪಾರ ಸಂಪತ್ತಿನ ಒಡೆಯನನ್ನಾಗಿ ಮಾಡುತ್ತದೆ ಮತ್ತು ಜೀವನದಲ್ಲಿ ಬಹಳಷ್ಟು ಯಶಸ್ಸನ್ನು ನೀಡುತ್ತದೆ.
ಬೆಂಗಳೂರು : ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಹಸ್ತದ ರೇಖೆಗಳ ಜೊತೆಗೆ, ಅಂಗೈಯಲ್ಲಿರುವ ಪರ್ವತಗಳು, ಮಂಗಳಕರ ಮತ್ತು ಅಶುಭಕರ ಗುರುತುಗಳು, ಆಕಾರಗಳು, ಚಿಹ್ನೆಗಳು ಸಹ ಬಹಳ ಮುಖ್ಯವಾಗಿರುತ್ತದೆ. ಹಸ್ತದಲ್ಲಿರುವ ಈ ಚಿಹ್ನೆಗಳು, ಪರ್ವತ, ರೇಖೆ ವ್ಯಕ್ತಿಯ ಜೀವನದ ಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಮಾತ್ರವಲ್ಲ, ಇದು ವ್ಯಕ್ತಿಯ ಭವಿಷ್ಯ ಮತ್ತು ಸ್ವಭಾವವನ್ನು ಹೇಳುತ್ತದೆ. ಈ ರೇಖೆಗಳು ಮತ್ತುಪರ್ವತಗಳು ಶನಿ ರೇಖೆ ಮತ್ತು ಶನಿ ಪರ್ವತವನ್ನು ಸಹ ಒಳಗೊಂಡಿವೆ. ಶನಿ ಪರ್ವತ ಮತ್ತು ಶನಿ ರೇಖೆಯ ಶುಭ ಮತ್ತು ಅಶುಭ ಸ್ಥಾನವು ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ.
ಅಂಗೈಯಲ್ಲಿನ ಮಧ್ಯದ ಬೆರಳಿನ ಕೆಳಗಿನ ಭಾಗವನ್ನು ಶನಿ ಪರ್ವತ ಎಂದು ಕರೆಯಲಾಗುತ್ತದೆ. ಶನಿ ಪರ್ವತವು ಕೈಯಲ್ಲಿ ಮಂಗಳಕರ ಸ್ಥಾನದಲ್ಲಿದ್ದರೆ, ಅದು ವ್ಯಕ್ತಿಯನ್ನು ಅಪಾರ ಸಂಪತ್ತಿನ ಒಡೆಯನನ್ನಾಗಿ ಮಾಡುತ್ತದೆ ಮತ್ತು ಜೀವನದಲ್ಲಿ ಬಹಳಷ್ಟು ಯಶಸ್ಸನ್ನು ನೀಡುತ್ತದೆ.
ಶನಿ ಪರ್ವತವು ಉತ್ತಮವಾಗಿ ವಿಕಸನಗೊಂಡಿದ್ದರೆ, ವ್ಯಕ್ತಿಯು ತುಂಬಾ ಅದೃಷ್ಟಶಾಲಿ ಎನ್ನಲಾಗುತ್ತದೆ. ಅಂತಹ ವ್ಯಕ್ತಿಯು ಜೀವನದಲ್ಲಿ ಉನ್ನತ ಸ್ಥಾನ ಮತ್ತು ಗೌರವವನ್ನು ಪಡೆಯುತ್ತಾನೆ. ಅಲ್ಲದೆ, ಇವರು ಜೀವನದಲ್ಲಿ ತಾವು ಏನಾಗಬೇಕು ಎಂದು ಬಯಸುತ್ತಾರೆಯೋ ಅದನ್ನು ಸಾಧಿಸಿಯೇ ತೀರುತ್ತಾರೆ.
ಶನಿ ಪರ್ವತವು ಹೆಚ್ಚು ಸ್ಪಷ್ಟವಾಗಿದ್ದರೆ ವ್ಯಕ್ತಿಯ ಸ್ವಭಾವವು ಒಂದೇ ಆಗಿರುವುದಿಲ್ಲ. ಆತನ ನಡವಳಿಕೆಯಲ್ಲಿ ಆಗಾಗ ಬದಲಾವಣೆಗಳಾಗುತ್ತವೆ. ಅಂಥವರನ್ನು ಅರ್ಥ ಮಾಡಿಕೊಳ್ಳುವುದು ಕೂಡಾ ಅಷ್ಟು ಸುಲಭವಲ್ಲ ಎನ್ನಲಾಗುತ್ತದೆ.
ಯಾರ ಅಂಗೈಯಲ್ಲಿ ಶನಿಯು ಪರ್ವತದಲ್ಲಿ ಚೆನ್ನಾಗಿ ರೂಪುಗೊಂಡಿರುತ್ತದೆ ಮತ್ತು ಸೂರ್ಯ ಮತ್ತು ಗುರು ಪರ್ವತವೂ ಸರಿಯಾಗಿ ವಿಕಸನಗೊಂಡಿರುತ್ತದೆ ಅಂತಹ ವ್ಯಕ್ತಿಯು ಜೀವನದಲ್ಲಿ ಬಹಳಷ್ಟು ಸಂಪತ್ತನ್ನು ಪಡೆಯುತ್ತಾನೆ. ಜೀವನದಲ್ಲಿ ಕೈತುಂಬಾ ಹಣ ಸಂಪಾದಿಸಿ ತಾವು ಹೋದ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನೂಏರುತ್ತಾನೆ.
ಶನಿ ಪರ್ವತದ ಜೊತೆಗೆ, ಅದರ ಮೇಲಿರುವ ಚಿಹ್ನೆಗಳು ಸಹ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತವೆ. ಶನಿ ಪರ್ವತದ ಮೇಲೆ ತ್ರಿಕೋನವು ರೂಪುಗೊಂಡರೆ, ಅದು ಶುಭ ಫಲಿತಾಂಶಗಳನ್ನು ನೀಡುತ್ತದೆ. ಮತ್ತೊಂದೆಡೆ, ಶನಿ ಪರ್ವತದ ಮೇಲೆ ಶಿಲುಬೆ ಅಥವಾ ದ್ವೀಪದ ಗುರುತು ಇರುವುದು ಅಶುಭವೆಂದು ಪರಿಗಣಿಸಲಾಗಿದೆ.
© ಇನ್ನೂ ಓದಿ >> ಕೃಪೆ : zeenewsindia.com/kannada
Download Our App for latest updates
Comments
Post a Comment
Please write your comments, suggestions and feedback.