ನದೆಹಲಿ: Free Wifi Through Facebook App - ತಂತ್ರಜ್ಞಾನದ ಇಂದಿನ ಕಾಲದಲ್ಲಿ ನಮ್ಮ ಪ್ರತಿಯೊಂದು ಕೆಲಸವೂ ಅಂತರ್ಜಾಲದ ಸಹಾಯದಿಂದ ಮುಗಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರ ಸ್ಮಾರ್ಟ್‌ಫೋನ್‌ನಲ್ಲಿ ಮೊಬೈಲ್ ಡೇಟಾದ ಸೌಲಭ್ಯವಿದೆ, ಇದರಿಂದ ನಾವು ಇಂಟರ್ನೆಟ್‌ನ ಲಾಭವನ್ನು ಪಡೆಯಲು ಸಾಧ್ಯವಾಗುತ್ತಿದೆ, ಆದರೆ ಸಾಮಾನ್ಯವಾಗಿ ಪ್ರತಿಯೊಬ್ಬರ ಮೊಬೈಲ್ ಡೇಟಾ ಸೀಮಿತವಾಗಿರುತ್ತದೆ. ಇಂದು ನಾವು ನಿಮಗೆ ಟ್ರಿಕ್ ವೊಂದರ ಮಾಹಿತಿಯನ್ನು ನೀಡುತ್ತಿದ್ದು, ಅದರ ಮೂಲಕ ನಿಮ್ಮ ಫೋನ್ ಅನ್ನು ನೀವು ಎಲ್ಲಿ ಬೇಕಾದರೂ ಕೂಡ ಉಚಿತ ವೈಫೈಗೆ ನೀವು ಸಂಪರ್ಕಿಸಬಹುದು ಮತ್ತು ಉಚಿತ ಇಂಟರ್ನೆಟ್ ಪಡೆಯಬಹುದು. ಈ ರೀತಿ ಫೇಸ್‌ಬುಕ್‌ನಿಂದ ಉಚಿತ ವೈಫೈ ಪಡೆಯಿರಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಫೇಸ್‌ಬುಕ್ ಉಚಿತ ವೈಫೈ ಅನ್ನು ನೀಡುತ್ತದೆ. ಆದರೆ ಇದಕ್ಕಾಗಿ ನೀವು ಕೆಲವು ಹಂತಗಳನ್ನು ಅನುಸರಿಸಬೇಕು ಮತ್ತು ನಂತರ ಉಚಿತ ಇಂಟರ್ನೆಟ್ ನಿಮಗೆ ಯಾವುದೇ ತೊಂದರೆಯಿಲ್ಲದೆ ಲಭಿಸುತ್ತದೆ. Facebook ಸಾರ್ವಜನಿಕ ವೈಫೈ ಹಾಟ್‌ಸ್ಪಾಟ್‌ನ ವಿವರಗಳನ್ನು ಒದಗಿಸುತ್ತದೆ, ತನ್ಮೂಲಕ ನೀವು ಉಚಿತ ಇಂಟರ್ನೆಟ್ ಅನ್ನು ಪಡೆಯಬಹುದು. ಇದನ್ನು ಮಾಡಲು ನಿಮಗೆ ಯಾವುದೇ ಅಪ್ಲಿಕೇಶನ್ ಅಗತ್ಯವಿಲ್ಲ ಮತ್ತು ಈ ವೈಶಿಷ್ಟ್ಯವು Android ಮತ್ತು iOS ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಈ ಸುಲಭ ಹಂತಗಳನ್ನು ಅನುಸರಿಸಿ >> ಫೇಸ್‌ಬುಕ್ ಮೂಲಕ ಉಚಿತ ಇಂಟರ್...